ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ

oplus_0
oplus_0
Published on

ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಸಂಪೂರ್ಣ ಹಳ್ಳಿಗಳ ಕ್ಷೇತ್ರವಾಗಿದ್ದು, ಪ್ರತಿಯೊಂದು ಊರಿನ ರಸ್ತೆ ಸುಧಾರಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಅಷ್ಟೂರ ಗ್ರಾಮದಿಂದ ಮಲ್ಕಾಪುರವರೆಗಿನ ಐದು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು, ಹಳ್ಳಿಗಳಿಗೆ ಸಮರ್ಪಕ ಮೂಲಸೌಕರ್ಯ ಒದಗಿಸಿದರೆ ಅಭಿವೃದ್ಧಿ ಹೊಂದಲು ಸಾಧ್ಯ. ರಸ್ತೆ, ಕುಡಿಯುವ ನೀರು, ನೀರಾವರಿ, ಶಾಲೆ ಕಟ್ಟಡ, ಸಮುದಾಯ ಭವನ, ಶೌಚಗೃಹ, ಯಾತ್ರಿ ನಿವಾಸ, ಸೇತುವೆ ಹೀಗೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರಲಾಗುತ್ತಿದೆ ಎಂದರು.
ಯಾವ ಕಾಮಗಾರಿಯಲ್ಲೂ ಲೋಪ ಕಾಣಬಾರದು. ಉತ್ತಮ ರೀತಿಯಲ್ಲಿ ನಿಗದಿತ ಅವಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರು ಮುಂದಾಗಬೇಕು. ಮಳೆಗಾಲ ಆರಂಭವಾಗಿದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ಹಳ್ಳಿಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಗ್ರಾಮಸ್ಥರಲ್ಲಿ ಕೋರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ ಮಲ್ಕಾಪುರ, ಪ್ರಮುಖರಾದ ಸುರೇಶ ಮಾಶೆಟ್ಟಿ, ಕುಶಾಲರಾವ ಶರಣಪ್ಪನೋರ್, ಚಂದ್ರಯ್ಯಾ ಸ್ವಾಮಿ, ಗುರುನಾಥ ಬಗದಲ್, ಓಂಕಾರ ಮಜಗೆ, ಜೋಸೆ-್ ಕೊಡ್ಡಿಕರ್, ಶಿವಕುಮಾರ ನಾಗಲಗಿದ್ದಿ, ರಾಹುಲ್ ಮೋರೆ, ಶಿವು ಸುಲ್ತಾನಪುರ, ಸಂಗಮೇಶ ಹಳ್ಳಿ, ಬಾಬುರಾವ ನಾಗಲಗಿದ್ದಿ, ಶಾಮಣ್ಣ, ಲೋಕೇಶ ಜೈನಾಪುರೆ, ಭದ್ರು ಸ್ವಾಮಿ, ರಾಜಕುಮಾರ ಕೋಳಿ, ತುಕಾರಾಮ ಕಲಾಲ್, ಆಕಾಶ ಕೋಟೆ, ಮಾರ್ಟಿನ್, ಸಂಜುಕುಮಾರ, ವಿಜಯಕುಮಾರ ಗುಮ್ಮಾ, ತುಕಾರಾಮ, ಧನರಾಜ ಭಾಲ್ಕಿ, ರಾಜಕುಮಾರರಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net