ತೈಲ ಬೆಲೆ ಹೆಚ್ಚಳ ಆದೇಶ ವಾಪಸ್ ಪಡೆಯಿರಿ

Oplus_0
Oplus_0
Published on

ಬೀದರ್: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿರುವುದನ್ನು ವಿರೋಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ವೇದಿಕೆ ಪ್ರಮುಖರು, ತೈಲ ಬೆಲೆ ಹೆಚ್ಚಳದಿಂದ ಸಾಕಷ್ಟು ಸಂಕಷ್ಟ ಎದುರಾಗಿದ್ದು, ತಕ್ಷಣ ದರ ಏರಿಕೆ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈಗಾಗಲೆ ನೋಂದಣಿ ಶುಲ್ಕ ದುಪ್ಪಟ್ಟು, ಬಾಂಡ್, ಮದ್ಯದ ದರ ಅಧಿಕ ಮಾಡಲಾಗಿದೆ. ನೀರಿನ ಕರವೂ ಜಾಸ್ತಿ ಆಗಿದೆ. ಹೀಗೆ ಅನೇಕ ಕರಗಳನ್ನು ಜನರ ಮೇಲೆ ಹಾಕಿದ ರಾಜ್ಯ ಸರ್ಕಾರ ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ವೇದಿಕೆ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನೀತಾ ಸಿ.ಬಿ.ಮರಕಲ್, ಸೈಯದ್ ನವಾಜ್, ಜಗನ್ನಾಥ ಕೌಠಾ, ಪ್ರಕಾಶ್ ಬಗದಲಕರ್, ನಾಗೇಶ ರಾಯಣ್ಣೋರ್, ಮೊಸೀನ್ ಪಟೇಲ್, ಪ್ರದೀಪ ಕೋಟೆ, ಪಿಂಟು ಸಿರ್ಸಿ, ವಿಜಯಕುಮಾರ, ಸೈಮನ್ ಮೇತ್ರೆ, ನಿಲೇಶ್ ರಾಠೋಡ್, ಶಿವು ಮಡಿವಾಳ, ಯೋಹಾನ್ ಮೀಸೆ, ಆಗಸ್ಟಿನ್ ಮೇತ್ರೆ, ಚಂದ್ರಕಾಂತ ಪೋಳ, ಜಾಫರ್ಮಿಯಾ, ಮೋಜಸ್ ಆಣದೂರೆ, ಅಂಬರೀಶ್ ಜುಲ್ಪೆನೋರ್, ಪ್ರಸಾದ ಘೋಡಂಪಳ್ಳಿಕರ್, ಶಿವು ಮೇತ್ರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net