

ಬೀದರ್: ಸಿಂದೋಲ್ ಗ್ರಾಮದ ರಸ್ತೆಯಲ್ಲಿ ಸುಮಾರು 40 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಗತಿಯಲ್ಲಿರುವ ಏಳು ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯನ್ನು ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ವೀಕ್ಷಿಸಿದರು.
ಹಲವು ವರ್ಷ ಹಳೆಯದಾಗಿದ್ದ ಈ ಸೇತುವೆ ಮಳೆಗಾಲದಲ್ಲಿ ಜಲಾವೃತಗೊಂಡು ಸಮಸ್ಯೆ ಎದುರಿಸುವಂತಾಗಿತ್ತು. ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಮಂಜೂರು ಮಾಡಿಸಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬೆಲ್ದಾಳೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆ ಸಮೀಪ ಹಾಗೂ 40 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಇದಾಗಿದೆ. ಈ ಮೂಲಕ ಸಾವಿರಾರು ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಕಾಮಗಾರಿ ಭರದಿಂದ ಸಾಗಿದ್ದು, ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಮುಖಂಡರಾದ ಸುರೇಶ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ಘಾಳೆಪ್ಪ ಚಟ್ನಳ್ಳಿ, ಧನರಾಜ ಜಾಧವ್, ಸೂರ್ಯಕಾಂತ, ಸಂತೋಷರಡ್ಡಿ, ಓಂಕಾರ ಮಜಗೆ, ಸಾಯಿನಾಥ ಪಾಟೀಲ್, ಕಾಶೀನಾಥ, ರಾಜಶೇಖರ ಸ್ವಾಮಿ, ರಮೇಶ ಕಾಟಾ, ಶಿವಶರಣಪ್ಪ ತಗಾರೆ, ರಾಜಕುಮಾರ ಶೇರಿ, ದಿಲೀಪ ನೀಲಾ, ಚನ್ನಶೆಟ್ಟಿ ಭಂಗೂರ, ಶಾಮರಾವ, ಲೋಕೋಪಯೋಗಿ ಅಕಾರಿ ಶಿವಶಂಕರ ಕಾಮಶೆಟ್ಟಿ ಇತರರಿದ್ದರು.