

ಬೀದರ್: ಪೂಜ್ಯರ ಆಶೀರ್ವಾದ, ಕ್ಷೇತ್ರದ ಜನರ ಬೆಂಬಲದಿಂದ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಗೆಲ್ಲುಸಿದ್ದು ಖುಷಿ ತಂದಿದೆ. ನಾನು ಸಂಸದನಲ್ಲ. ಜನ ಸೇವಕನೆಂದು ಭಾವಿಸಿ ಕೆಲಸ ಮಾಡುವೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ನೌಬಾದ್ ಬಳಿಯ ಔದುಂಬರಲಿಂಗ ಮಲ್ಲಿನಾಥ ಆಶ್ರಮದಲ್ಲಿ ಸೋಮವಾರ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ದರ್ಶನಾಶೀರ್ವಾದ ಪಡೆದು ಮಾತನಾಡಿ, ಜನಸೇವೆ ಏಕೈಕ ಧ್ಯೇಯದಿಂದಿ ರಾಜಕೀಯಕ್ಕೆ ಬಂದಿದ್ದೇನೆ. ಮೊದಲ ಯತ್ನದಲ್ಲೇ ಕ್ಷೇತ್ರದ ಜನರು ಉತ್ತೀರ್ಣ ಮಾಡಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕೆಲಸ ಮಾಡಿ ತೋರಿಸುವೆ ಎಂದರು.
ಕ್ಷೇತ್ರದ ಪ್ರಗತಿಗೆ ನನ್ನದೇ ಆದ ವಿಜನ್ ಗಳಿದ್ದು, ಎಲ್ಲರ ಸಹಕಾರ, ಮಾರ್ಗದರ್ಶನದಿಂದ ಸಾಕಾರಕ್ಕೆ ಪ್ರಯತ್ನಿಸುವೆ. ತಾರತಮ್ಮ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ ಎಂದು ಹೇಳಿದರು.
ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ತಸ್ಲೀಮ್ ಬೇಗಂ, ಭಾಲ್ಕಿ ತಾಲೂಕಾಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ, ಶಿವಕುಮಾರ ಮದನೂರ, ಪ್ರಕಾಶ ಶಂಭು, ದಿಲೀಪ ಪಾಟೀಲ್, ಮಾಣಿಕ, ನಂದೇಶ ಪಾಟೀಲ್, ಆನಂದ ರಾಂಪುರೆ, ಮಲ್ಲು ಕೊಳಾರ್, ಸಂಗಮೇಶ, ಸಂತೋಷ, ಶಂಕರ ಖ್ಯಾಮಾ, ಲೋಕೇಶ, ಬಾಬುರಾವ ಪಾಟೀಲ್, ಆನಂದ, ಸಾಗರ್ ಪಾಟೀಲ್, ಕೈಲಾಸ, ಗುರು, ಸಿದ್ದಪ್ಪ ಇತರರಿದ್ದರು.