ಇಂದಿರಾ ಕ್ಯಾಟೀನ್ ವಿರೋಧಕ್ಕೆ ಖಂಡನೆ

Vijaykumar Sonare
Published on

ಬೀದರ್: ನಗರದ ಮನ್ನಳ್ಳಿ ರಸ್ತೆಯ ಮೈಲೂರು ಕ್ರಾಸ್ ಬಳಿಯ ಉದ್ಯಾನದಲ್ಲಿ ಇಂದಿರಾ ಕ್ಯಾಂಟೀನ್ ನಿಮರ್ಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದ್ದಾರೆ.
ಕ್ಯಾಂಟೀನ್ ನಿರ್ಮಿಸಿದರೆ ಬಡ ಕೂಲಿ ಕಾರ್ಮಿಕರಿಗೆ, ಸುತ್ತಲಿನ ಜನರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ಸಿಗುತ್ತದೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಮೈಲೂರು ಕ್ರಾಸ್ ಬಳಿಯೇ ಕ್ಯಾಂಟೀನ್ ತೆರೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net