ವೀರಶೈವ ಮಹಾಸಭೆ ಚುನಾವಣೆ ಜು.21ಕ್ಕೆ

images
Published on

ಬೀದರ್: ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಮತ್ತು ಎಲ್ಲ ತಾಲೂಕು ಘಟಕ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ 2024-25ರಿಂದ 2028-29ರ ಅವ ಆಯ್ಕೆಗಾಗಿ ಜು.21ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವರಾಜ ಎಂ.ರೊಟ್ಟೆ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ತಾಲೂಕು ಮತ್ತು ಜಿಲ್ಲಾ ಘಟಕಗಳಿಗೆ, ಬಳಿಕ ಮಹಾಸಭೆ ಕೇಂದ್ರ ಸಮಿತಿಗೆ ಚುನಾವಣೆ ಜರುಗಲಿದೆ. ತಾಲೂಕು ಮತ್ತು ಜಿಲ್ಲಾ ಘಟಕದ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಪರ್ಧಿಸಲು ಮತ್ತು ಮತದಾನ ಮಾಡಲು ಮತದಾರರ ತಾತ್ಕಾಲಿಕ ಪಟ್ಟಿ ಜೂ.15ರಂದು ಮತ್ತು ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಜೂ.20ರಂದು ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.27ರಿಂದ ಜು.4ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಪರಿಶೀಲನೆ ಜು.5, ಉಮೇದುವಾರಿಕೆ ವಾಪಸ್ ಪಡೆಯಲು ಜು.8 ಕೊನೆಯ ದಿನ. ಜು.21ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಸ್ಥಾಪಿಸುವ ಐದು ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಬಳಿಕ ಅಂದೇ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿವರಿಸಿದ್ದಾರೆ.
ಬೀದರ್ ಜಿಲ್ಲಾ ಹಾಗೂ ತಾಲೂಕು ಘಟಕದ ಚುನಾವಣೆ ವಿದ್ಯಾನಗರ ಕಾಲನಿಯ ವಿ.ಕೆ. ಇಂಟರ್ನ್ಯಾಷನಲ್ ಶಾಲೆ ಆವರಣದಲ್ಲಿ ನಡೆಯಲಿದೆ. ಔರಾದ್ ತಾಲೂಕು ಘಟಕದ ಚುನಾವಣೆ ಔರಾದ್ ಅಮರೇಶ್ವರ ಕನ್ಯಾ ಪ್ರೌಢಶಾಲೆ, ಭಾಲ್ಕಿ ತಾಲೂಕಿನ ಚುನಾವಣೆ ಭಾಲ್ಕಿಯ ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆ, ಹುಮನಾಬಾದ್ ತಾಲೂಕಿನ ಚುನಾವಣೆ ಹುಮನಾಬಾದ್ ವೀರಭದ್ರೇಶ್ವರ ಮಂದಿರ ಹತ್ತಿರ ಹಾಗೂ ಬಸವಕಲ್ಯಾಣ ತಾಲೂಕಿನ ಚುನಾವಣೆ ಬಸವಕಲ್ಯಾಣದ ಬಸವ ಪರಷಕಟ್ಟೆ ಬಳಿ ಕೇಂದ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net