ರೂ.5.49 ಕೋಟಿ ಕಾಮಗಾರಿಗೆ ಚಾಲನೆ

Chavan
Published on

ಔರಾದ್: ಶಾಸಕ ಪ್ರಭು ಚವ್ಹಾಣ್ ಗುರುವಾರ ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ಸೇರಿ ನಾನಾ ಕಾಮಗಾರಿಗಳನ್ನು ಪರಿಶೀಲಿಸುವ ಜತೆಗೆ ವಿವಿಧ 5.49 ಕೋಟಿ ರೂ. ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದರು.
ದೇಶಮುಖ ಗಲ್ಲಿ, ಟೀಚಸ್೯ ಕಾಲನಿ ಸೇರಿ ಹಲವೆಡೆ ಸಂಚರಿಸಿ ಅಂಗನವಾಡಿ ಕಟ್ಟಡ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹೆಚ್ಚುವರಿ ಕೋಣೆ, ಸೋಲಾರ್, ಆರ್ಒ ಪ್ಲಾಂಟ್, ಎಪಿಎಂಸಿ ಬಳಿ ಸಿಸಿ ರಸ್ತೆ, ಪಾಲಿಟೆಕ್ನಿಕ್ ಕಾಲೇಜು ಕಟ್ಟಡ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಅಭಿವೃದ್ಧಿ, ಪದವಿ ಕಾಲೇಜಿನಲ್ಲಿ ಉನ್ನತೀಕರಣ, ಶೌಚಗೃಹ, ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಚವ್ಹಾಣ್ ಭೂಮಿಪೂಜೆ ನೆರವೇರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಪೀಠೋಪಕರಣ ಇತರ ಉಪಕರಣಗಳ ಅಳವಡಿಕೆ, ಹಿರಿಯ ಪ್ರಾಥಮಿಕ ಶಾಲೆ ಉನ್ನತೀಕರಣ ಕೆಲಸ ಹಾಗೂ ಆರ್.ಒ ಪ್ಲಾಂಟ್ ಅಳವಡಿಸುವುದನ್ನು ಒಳಗೊಂಡು ಪಟ್ಟಣದಲ್ಲಿ 5.49 ಕೋಟಿ ವೆಚ್ಚದ ವಿವಿಧ ಪ್ರಗತಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಔರಾದ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನಿಸುತ್ತಿದ್ದು, ಜನರ ಬೇಡಿಕೆಯಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಾಸಕ ಚವ್ಹಾಣ್ ಸೂಚಿಸಿದರು.
ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ, ಮುಖಂಡ ರಾಮಶೆಟ್ಟಿ ಪನ್ನಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net