ಫಸಲ್ ಬಿಮಾಗೆ ರಾಜ್ಯದಿಂದ ನಿರ್ಲಕ್ಷ್ಯ

khuba visit
Published on

ಬೀದರ್: ಕೇಂದ್ರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಬೀದರ್ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ದೂರಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಶುಭ ಕೊರಿ ಬೀದರ್ ಕ್ಷೇತ್ರದ ರೈತರ ವಿಷಯಗಳ ಕುರಿತು ಚರ್ಚಿಸಿದರು. ಫಸಲ್ ಬಿಮಾ ಯೋಜನೆ ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು.
ಯೋಜನೆ ಪ್ರಾರಂಭವಾದಾಗಿನಿಂದ ಬೀದರ್ ಜಿಲ್ಲೆ ನೋಂದಣಿ ಹಾಗೂ ಪರಿಹಾರ ಪಡೆಯುವುದರಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ಖುದ್ದಾಗಿ ಜಿಲ್ಲೆ ರೈತರನ್ನು ಶ್ಲಾಘಿಸಿದ್ದಾರೆ. ಆದರೆ ಕಳೆದ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೊಜನೆ ಕುರಿತು ಅಪಪ್ರಚಾರ ನಡೆಯುತ್ತಿದೆ. ಯೋಜನೆ ಲಾಭ ರೈತರಿಗೆ ಸರಿಯಾಗಿ ಸಿಗದಂತೆ ಮಾಡುವ ಹುನ್ನಾರ ಹಾಗೂ ಫಸಲ್ ಬಿಮಾದಿಂದ ರೈತರು ದೂರ ಉಳಿಯುವಂತೆ ಮಾಡಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ಕಳೆದ ವರ್ಷ ರಾಜ್ಯದಲ್ಲಿ ಬರಗಾಲವಿತ್ತು. ರೈತರು ಸಾಕಷ್ಟು ಪ್ರಮಾಣದಲ್ಲಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿದ್ದರು. ಆದರೆ ರಾಜ್ಯ ಸರ್ಕಾರ ಅಧಿಕಾರಿಗಳಿಂದ ಸರಿಯಾಗಿ ಬೆಳೆ ಸಮೀಕ್ಷೆ ಮಾಡಿಸಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ನಿರ್ಲಕ್ಷ್ಯ ಮಾಡುವಂತೆ ಕುಮ್ಮಕ್ಕು ನೀಡಿದೆ. ಸರ್ಕಾರ ಕೇವಲ ವಿಮಾ ಕಂಪನಿ ವಿರುದ್ಧ ಮಾತನಾಡುವುದು, ಆರೋಪ ಹೊರೆಸುವುದನ್ನು ಮಾಡಿದೆ. ಇದರಿಂದ ಜಿಲ್ಲೆ ರೈತರಿಗೆ ಸರಿಯಾಗಿ ಬೆಳೆ ವಿಮೆ ಬಂದಿಲ್ಲ ಎಂದು ಖೂಬಾ ಆರೋಪಿಸಿದರು.
ವಿಮೆ ಕಂಪನಿಯಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕಂಪನಿಯವರಿಂದ ತಪ್ಪಾಗುತ್ತಿದ್ದರೆ ಅವರ ವಿರುದ್ಧ ವರದಿಯನ್ನು ಕೇಂದ್ರಕ್ಕೆ ಕಳುಹಿಸಬೇಕು. ಆದರೆ ರಾಜ್ಯ ಸರ್ಕಾರ ಇದ್ಯಾವುದು ಮಾಡದೆ, ತನ್ನ ಅಕಾರಿಗಳಿಗೂ ಸರಿಯಾಗಿ ಸೂಚನೆ ನೀಡಿಲ್ಲ. ಅಗತ್ಯ ಕ್ರಮ ಕೈಗೊಂಡು ಎಲ್ಲ ರೈತರಿಗೆ ಯೋಜನೆ ಲಾಭ ಸಿಗುವಂತೆ ಮಾಡಬೇಕು ಎಂದು ಕೋರಿದರು.
ಅಕಾರಿಗಳೊಂದಿಗೆ ಚಚರ್ಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ. ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಈ ಯೋಜನೆ ಕುರಿತು ವಿಶೇಷವಾಗಿ ಚಚರ್ಿಸಿ ಅಗತ್ಯ ಸಹಕಾರ ಪಡೆದು ರೈತರಿಗೆ ಹೆಚ್ಚಿನ ಲಾಭ ಸಿಗುವಂತೆ ಮಾಡುವುದಾಗಿ ಚೌಹಾಣ್ ಭರವಸೆ ನೀಡಿದ್ದಾರೆ ಎಂದು ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net