ವಿದ್ಯಾರ್ಥಿಗಳು ಸಾಧಿಸುವ ಛಲ ಬೆಳೆಸಿಕೊಳ್ಳಲಿ

Jasmine College Pratibha purskar
Published on

ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಜಾಸ್ಮಿನ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಅಜೀಜ್ ಖಾನ್ ಸಲಹೆ ಮಾಡಿದರು.
ನಗರದ ಬಿಲಾಲ್ ಕಾಲನಿಯಲ್ಲಿರುವ ಜಾಸ್ಮಿನ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ, ಕೆಸಿಇಟಿ ಹಾಗೂ ನೀಟ್ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡತನ ಸೇರಿ ಯಾವುದೂ ಸಾಧನೆಗೆ ಅಡ್ಡಿ ಆಗುವುದಿಲ್ಲ. ಕಠಿಣ ಪರಿಶ್ರಮ ವಹಿಸಿದ್ದಲ್ಲಿ ಅಂದುಕೊಂಡ ಗುರಿ ಮುಟ್ಟಬಹುದು. ದ್ವಿತೀಯ ಪಿಯುಸಿ, ಕೆಸಿಇಟಿ ಹಾಗೂ ನೀಟ್ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಕಾಲೇಜು ಪ್ರಾಚಾರ್ಯ ಗೌತಮ ಕಸ್ತೂರೆ, ಉಪನ್ಯಾಸಕರಾದ ಸುನೀಲ ಮಾಳಗೆ, ಶರಣಕುಮಾರ, ಸೋಬಿಯಾ ನಾಝ್ ಫಾತಿಮಾ, ಬಧರ್ ಇತರರಿದ್ದರು. ನೀಟ್, ಕೆಸಿಇಟಿಯಲ್ಲಿ ಸಾಧನೆಗೈದ ನಮ್ರತಾ ಸಂಜೀವಕುಮಾರ, ಮಹ್ಮದ್ ಶಾಬಾಜ್, ಅಝ್ರಾ ಬುತೋಲ್, ಮಹ್ಮದ್ ನಾಸೇರ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net