ಗುಡ್‍ವಿಲ್ ಶಾಲೆ: ಉಚಿತ ಪ್ರವೇಶ ದಿನಾಂಕ ವಿಸ್ತರಣೆ

Published on

ಬೀದರ್: ನಗರದ ಮಡಿವಾಳ ವೃತ್ತ ಸಮೀಪದ ಕೆ.ಎಚ್.ಬಿ. ಕಾಲೊನಿಯಲ್ಲಿ ಇರುವ ಗುಡ್‍ವಿಲ್ ಪಬ್ಲಿಕ್ ಶಾಲೆಯು ಹೆಣ್ಣುಮಕ್ಕಳ ಹಾಗೂ ಕಾರ್ಮಿಕರ ಮಕ್ಕಳ ಉಚಿತ ಪ್ರವೇಶ ದಿನಾಂಕವನ್ನು ವಿಸ್ತರಿಸಿದೆ.
ಈ ಹಿಂದೆ ಮೇ 31 ಕೊನೆಯ ದಿನವಾಗಿತ್ತು. ಇದೀಗ ಪ್ರವೇಶ ಅವಧಿಯನ್ನು ಜೂನ್ 20 ರ ವರೆಗೆ ವಿಸ್ತರಿಸಲಾಗಿದೆ ಎಂದು ಶಾಲೆಯ ಪ್ರಾಚಾರ್ಯೆ ಪ್ರೇಮಾಕುಮಾರಿ ತಿಳಿಸಿದ್ದಾರೆ.
ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಡಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಶಾಲೆಯಲ್ಲಿ 1 ರಿಂದ 10 ತರಗತಿ ವರೆಗೆ 25 ಹೆಣ್ಣುಮಕ್ಕಳಿಗೆ ಉಚಿತ ಪ್ರವೇಶ ಕೊಡಲಾಗುತ್ತಿದೆ. ಕಾರ್ಮಿಕರ ಗುರುತಿನ ಚೀಟಿ ಹೊಂದಿದ 25 ಕಾರ್ಮಿಕರ ಮಕ್ಕಳಿಗೂ ಉಚಿತ ಪ್ರವೇಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗೆ ಶಾಲೆಗೆ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 8971372663 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net