

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ನಗರದ ವಿಜಡಂ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ನಾಲ್ವರು ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಪರ್ವೇಜ್ ಅಖ್ತರ್ ಮೊಹಮ್ಮದ್ ಇಸಾಕ್ ಅಹಮ್ಮದ್ 667 ಅಂಕ, ಮೊಹಮ್ಮದ್ ಸಮೀರ್ ಮೊಹಮ್ಮದ್ ಸಲಾಂ ಪಾಶಾ 655, ಆಫಿಯಾ ತಸ್ಕೀನ್ ಮೊಹಮ್ಮದ್ ಮದಾರ್ 621 ಹಾಗೂ ಶಗುಫ್ತಾ ಮಾಹೀನ್ ಅಬ್ದುಲ್ ಸಮಿ 600 ಅಂಕ ಪಡೆದಿದ್ದಾರೆ.
ಕಾಲೇಜಿನ 10ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್‍ಎಂಎಸ್ ಸೀಟು ಪಡೆಯುವ ನಿರೀಕ್ಷೆ ಇದೆ ಎಂದು ವಿಜಡಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆಸಿಫೊದ್ದಿನ್ ಹಾಗೂ ಕಾರ್ಯದರ್ಶಿ ಮೊಹಮ್ಮದ್ ಸಾಲಹೊದ್ದಿನ್ ಫರ್ಹಾನ್ ತಿಳಿಸಿದ್ದಾರೆ.