ಮರಾಠ ಸಮಾಜ ಹರ್ಷ

Marutirao Mule
Published on

ಬೀದರ್: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಬಿಜೆಪಿ ಮರಾಠ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಮಾರುತಿರಾವ್ ಮುಳೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಜಿಲ್ಲೆಯ ಮರಾಠ ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೀದರ್‍ನ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಮಾಜಕ್ಕೆ ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯ ದೊರಕಿಸಿಕೊಡುವ ಆಶ್ವಾಸನೆ ನೀಡಿದ್ದರು. ಈ ಬಗ್ಗೆ ಪಕ್ಷದ ಮುಖಂಡರ ಗಮನ  ಸೆಳೆದಿದ್ದರು. ಅದರ ಫಲವಾಗಿ ಈಗ ಸಮಾಜದ ಮುಳೆ ಅವರಿಗೆ ಮೇಲ್ಮನೆ ಪ್ರವೇಶಿಸುವ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯದ ಆಧಾರದಲ್ಲಿ ಸಮಾಜಕ್ಕೆ ಸ್ಥಾನ ಕಲ್ಪಿಸಿದ ಬಿಜೆಪಿಯ ರಾಜ್ಯ, ಜಿಲ್ಲೆಯ ಮುಖಂಡರು ಹಾಗೂ ಭಗವಂತ ಖೂಬಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾ ಅಧ್ಯಕ್ಷ
ದಿಗಂಬರರಾವ್ ಮಾನಕಾರಿ, ಮರಾಠ ಕ್ರಾಂತಿ ಮೂಕ ಮೋರ್ಚಾ ಜಿಲ್ಲಾ ಸಂಯೋಜಕ ವೆಂಕಟೇಶರಾವ್ ಮಾಯಿಂದೆ, ಜಿ.ಪಂ. ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮುಖಂಡರಾದ ದಿಗಂಬರರಾವ್ ಪಾಟೀಲ ಚಾಂದೋರಿ, ಸತೀಶ್ ವಾಸರೆ, ವಿದ್ಯಾವಾನ್ ಪಾಟೀಲ, ತಾತ್ಯಾರಾವ್ ಪಾಟೀಲ, ದಾಮೋಧರ ನೆಲವಾಡೆ, ಅಭಿಮನ್ಯು ನಿರಗುಡೆ, ಕಿಶನರಾವ್ ಪಾಟೀಲ ಇಂಚೂರ್, ಭಾವುರಾವ್ ಪಾಟೀಲ ಘಾಟಬೋರಾಳ್, ರಾಮರಾವ್ ಬಿರಾದಾರ, ಯಾದವರಾವ್ ಕನಸೆ, ಶಾಹುರಾಜ ಪವಾರ್, ನಿಲೇಶ್ ರಕ್ಷಾಳ್ ಮತ್ತಿತರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net