ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರವೂ ನೀಡಿ

kolar
Published on

ಬೀದರ್: ಇಂದಿನ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರವೂ ನೀಡುವ ಅಗತ್ಯವಿದೆ. ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಬೇಕಾಗಿದೆ ಎಂದು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರು ನುಡಿದರು.
ಸಾಯಿಬಾಬಾ ಮಂದಿರ ಜಾತ್ರೆ ನಿಮಿತ್ತ ಕೊಳಾರ್(ಕೆ) ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳು ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಹಿತೋಪದೇಶ ನೀಡಿದರು.
ಹಳ್ಳಿಗರು ಸೌಹಾರ್ದದಿಂದ ಬಾಳಬೇಕು. ಪರಸ್ಪರರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಪರೋಪಕಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಭಾರತ ಸಾಧು-ಸಂತರು, ಸೂಫಿಗಳ ಪುಣ್ಯ ಭೂಮಿ. ಈ ಮಣ್ಣಿನಲ್ಲಿ ಜನಿಸಿದ ಎಲ್ಲರೂ ಧನ್ಯರು. ಸಾಯಿಬಾಬಾ ಭಕ್ತರ ಕಷ್ಟ ಪರಿಹರಿಸಿದ್ದರು. ರೋಗಿಗಳ ಕೈಮುಟ್ಟಿ ಕುಷ್ಠರೋಗ ಗುಣಪಡಿಸುತ್ತಿದ್ದರು. ಇಂಥ ಪವಾಡಗಳಿಂದಲೇ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಸಾಯಿಬಾಬಾ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.
ಪ್ರಮುಖರಾದ ಅಮರ ವಡಗೈ, ದಿಲೀಪ ವಡಗೈ, ಅನೀಲ ಕೋಟೆ, ಮಹೇಶ ಉಪಕಾರ, ರಾಹುಲ್ ಬಿರಾದಾರ್, ಚೇತನ್ ಸೋರಳ್ಳಿ, ಶಿವಕುಮಾರ ಪಟೇಲ್, ಪಂಡಿತ, ವಿಶಾಲ್, ಶಂಕರ ಸಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net