

ಬೀದರ್: ನಾರ್ಕೋಟಿಕ್ ಅಂಶವಿರುವ ಔಷಧ ಬಾಟಲ್ ಮತ್ತು ಮಾತ್ರೆ ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿದೆ.
ಇಲ್ಲಿನ ನ್ಯೂ ಆದರ್ಶ ಕಾಲನಿ ಹಾಗೂ ನಗರ ಹೊರವಲಯದ ಅಗ್ರಹಾರದಲ್ಲಿ ನಾರ್ಕೋಟಿಕ್ ಅಂಶ ಇರುವ ಔಷಧ ಬಾಟಲ್ ಮತ್ತು ಮಾತ್ರೆಗಳು ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, 87,956 ರೂ. ಮೌಲ್ಯದ ಔಷಧ, 50 ಸಾವಿರ ರೂ. ಬೈಕ್ ಸೇರಿ 1,37,956 ರೂ. ಮೌಲ್ಯದ ವಸ್ತು ಜಪ್ತಿ ಮಾಡಿ ಮೂವರನ್ನು ಬಂಸಿದ್ದಾರೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.