ತಪ್ಪಿದ ಭಾರಿ ಅನುಹುತ

2
Published on

ಬೀದರ್: ಅಮಲಾಪುರ ಬಳಿ ಸೋಮವಾರ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಚಿಲ್ಲರ್ಗಿಯಿಂದ ಬೀದರ್ ಕಡೆ ಬರುತ್ತಿದ್ದ ವೇಳೆ ಅಮಲಾಪುರ ಹತ್ತಿರ ಬಸ್ನ ಬ್ರೇಕ್ ಫೇಲ್ ಆಗಿದೆ. ತಕ್ಷಣ ಎಚ್ಚೆತ್ತ ಚಾಲಕ ಆಲದ ಮರಕ್ಕೆ ಗುದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 30ಕ್ಕೂ ಹೆಚ್ಚು ಜನ ಬಸ್ ನಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net