ಪಡಿತರ ಅಕ್ಕಿ, ವಾಹನ ಜಪ್ತಿ

bagdal
Published on

ಬೀದರ್: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಟೋ ತಡೆದ ಪೊಲೀಸರು, ಏಳು ಕ್ವಿಂಟಾಲ್ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ನಿಂಗಪ್ಪ ಮಣ್ಣೂರ ನೇತೃತ್ವದ ತಂಡ ಹೊಚಕನಳ್ಳಿ ಹತ್ತಿರ ದಾಳಿ ನಡೆಸಿ 23,800 ರೂ. ಮೌಲ್ಯದ 7 ಕ್ವಿಂ. ಪಡಿತರ ಅಕ್ಕಿ, ಒಂದು ಲಕ್ಷದ ಆಟೋ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದೆ. ಬಗದಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್ಐ ಮಹಾದೇವಿ, ಸಿಬ್ಬಂದಿ ರವಿಕಾಂತ, ಪ್ರಶಾಂತ, ಮಾಳಪ್ಪ, ಆಹಾರ ನಿರೀಕ್ಷಕ ಅರುಣಕುಮಾರ ತಂಡದಲ್ಲಿದ್ದರು. ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಚನ್ನಬಸವಣ್ಣ ಲಂಗೋಟಿ, ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಖಾಕಿ ಪಡೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net