

ಬೀದರ್: ಬಸವ ತತ್ವ ಪ್ರಚಾರಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದ ಲಿಂಗಾಯತ ಮಹಾಮಠದ ಪೂಜ್ಯ ಡಾ.ಅಕ್ಕ ಅನ್ನಪೂರ್ಣ ಲಿಂಗೈಕ್ಯದಿಂದ ಸಮಾಜ ಮತ್ತು ಬಸವ ಭಕ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ತಿಳಿಸಿದ್ದಾರೆ.
ಕಟ್ಟಾ ಬಸವ ತತ್ವ ಅನುಯಾಯಿಯಾಗಿದ್ದ ಪೂಜ್ಯರು, ವಚನ ವಿಜಯೋತ್ಸವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಪ್ರಯತ್ನಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.