

ಬೀದರ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 22ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ಕೇಂದ್ರ ಸಮಿತಿಯ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ ಚುನಾವಣೆ ಇತ್ತೀಚೆಗೆ ನಡೆಯಿತು. ಸಂಘದ ಬೀದರ್ ವಿಭಾಗದ ಸ್ಥಳೀಯ ಸಮಿತಿಯಿಂದ ಕೇಂದ್ರ ಸಮಿತಿಗೆ ವೀರಣ್ಣ ಮುದ್ನಾಳೆ ನೇತೃತ್ವದ ಪೆನಾಲ್ ಭರ್ಜರಿ ಜಯಗಳಿಸಿದೆ. ವೀರಣ್ಣ ಮುದ್ನಾಳೆ, ಗುರುನಾಥ, ಭರತ ಭೂಷಣ, ಅಖೀಲ್ ಪಾಶಾ, ಮಹೇಶ ಘಾಳೆ, ರುದ್ರೇಶ ಮತ್ತು ಸೂರ್ಯಕಾಂತ ಆಯ್ಕೆಯಾಗಿದ್ದಾರೆ.