

ಬೀದರ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ 22ನೇ ತ್ರೈವಾರ್ಷಿಕ ಪ್ರಾಥಮಿಕ ಪ್ರತಿನಿಧಿಯಾಗಿ ಕಮಠಾಣ ಉಪ ವಿಭಾಗದ ಪ್ರಾಥಮಿಕ ಸಮಿತಿಯಿಂದ ರಾಜಕುಮಾರ ಕರ್ಣೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ವಿಜಯಕುಮಾರ ಪಾಂಚಾಳ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನಂತರ ಕರ್ಣೆ ಅವರನ್ನು ಜೆಸ್ಕಾಂ ನೌಕರರು ಸನ್ಮಾನಿಸಿದರು. ಕಮಠಾಣ ಉಪ ವಿಭಾಗದ ಅಧ್ಯಕ್ಷ ವಿಜಯಕುಮಾರ ಡುಮ್ಮೆ, ಕಾರ್ಯದರ್ಶಿ ಅಲಿಮೊದ್ದೀನ್, ಸುಮಂತ ಕಟ್ಟಿಮನಿ, ಬಸವರಾಜ ಜೈನಪುರೆ, ಶಾಮರಾವ, ದಶರಥ, ಮನೋಹರ, ವಾಜೀದ್, ತೂಕರಾಮ, ಅಹ್ಮದ್, ಸಿದ್ದು, ಕೈಲಾಸ ಇತರರಿದ್ದರು.