ವಿಶ್ವ ಜೀವವೈವಿಧ್ಯ ದಿನಾಚರಣೆ

dinada chitra
Published on

ಬೀದರ್: ಜೀವ ವೈವಿಧ್ಯ ಸಂರಕ್ಷಿಸುವುದು ಮತ್ತು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರೊ. ಸಂಗಯ್ಯ ಕಲ್ಮಠ ಹೇಳಿದರು.
ಇಲ್ಲಿನ ವಿವೇಕಾನಂದ ಬಡಾವಣೆ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜೀವ ವೈವಿಧ್ಯ ದಿನಾಚರಣೆಯಲ್ಲಿ ಮಾತನಾಡಿ, ವೈವಿಧ್ಯ ನಾಶವಾದರೆ ಮನುಕುಲ ನಾಶವಾಗುವುದು. ಹೀಗಾಗಿ ಸಸಿ ನೆಟ್ಟು ಜೀವ ಸಂಕುಲವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ವಿವೇಕಾನಂದ ಬಡಾವಣೆು ಮಿತ್ರ ಮಂಡಳಿ ಅಧ್ಯಕ್ಷ ಸಂಜುಕುಮಾರ ಸಜ್ಜನ್,
ಬಕ್ಕಪ್ಪ ಶೇರಿಕಾರ, ವಿಠಲ ಪಾಂಚಾಳ, ಬಾಲಾಜಿ, ಸೂರ್ಯಕಾಂತ ಮಾಳಗೆ, ಶಿವರಾಜ ಬಿರಾದಾರ್, ದಿಲೀಪಕುಮಾರ ಹುಲಸೂರೆ, ಅಶೋಕರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net