ಅಲಿಯಂಬರ್ ಹಾಲು ಸಂಘಕ್ಕೆ ರಿಕ್ಕೆ ಅಧ್ಯಕ್ಷ

sachin rikke
Published on

ಬೀದರ್: ತಾಲೂಕಿನ ಅಲಿಯಂಬರ್ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಚಿನ್ ಶರಣಪ್ಪ ರಿಕ್ಕೆ ಅವಿರೋಧ ಆಯ್ಕೆಯಾದರು.
ಸಂಘದಲ್ಲಿ ಮಂಗಳವಾರ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ರಾಜಕುಮಾರ ಶರಣಪ್ಪ, ನಿರ್ದೇಶಕರಾದ ಮಹಾದೇವ ಬಿರಾದಾರ್, ಕಲ್ಲಪ್ಪ ಹುಲೇಪ್ಪ, ಸುಭಾಷ ಲಸ್ಕರೆ, ಶಿವರಾಜ ಬಶಟ್ಟೆ, ಪ್ರೇಮಾವತಿ ನರಸಪ್ಪ, ಪಂಚಶೀಲ ರವಿ, ಈರಮ್ಮ ರಾಜಪ್ಪ, ಅನೀಲ ಘಾಳೆಪ್ಪ, ಶಿವಕುಮಾರ ರಾಯಗೊಂಡೆ, ಶರಣಪ್ಪ ನಾಗಪ್ಪ, ಕಾರ್ಯದರ್ಶಿ ಅಶೋಕ ಖಂಡ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net