ವಿವಿಧೆಡೆ ಜಿಟಿಜಿಟಿ ಮಳೆ

Koutha
Published on

ಬೀದರ್: ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿಜಿಟಿ ಮಳೆಯಾದರೆ, ಶನಿವಾರ ರಾತ್ರಿ ಔರಾದ್ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ನಗರ ಸೇರಿ ವಿವಿಧೆಡೆ ಸಂಜೆ ಮಳೆಯಾಗಿದ್ದು, ಮೋಡಕವಿದ ವಾತಾವರಣ ಮುಂದುವರಿದಿದೆ.
ಬಿರುಗಾಳಿಯಿಂದ ಮಾವಿನ ಕಾಯಿಗಳು ನೆಲ್ಕುರುಳಿದ್ದು, ಹೊಲ-ತೋಟಗಳಲ್ಲಿನ ಟೊಮ್ಯಾಟೊ, ಕಲ್ಲಂಗಡಿ ಸೇರಿ ವಿವಿಧ ತೋಟಗಾರಿಕೆ ಬೆಳೆ, ತರಕಾರಿಗಳು ಹಾನಿಗೀಡಾಗಿವೆ. ಕೆಂಡದಂಥ ಬಿಸಿಲಿಗೆ ಜನ ಬೇಸತ್ತಿದ್ದರು. ಆದರೆ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಇಳೆ ತಂಪಾಗಿದ್ದು, ಜನ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರ ರಾತ್ರಿ ಔರಾದ್ ತಾಲೂಕಿನ ಕೆಲ ಗ್ರಾಮಗಳಲ್ಲಿ ಸುರಿದ ಮಳೆಯಿಂದ ಹೊಲಗಳು ಕೆರೆಯಂತಾಗಿ ಮಾರ್ಪಟ್ಟಿವೆ. ಕೌಠಾ(ಬಿ), ಕೌಠಾ (ಕೆ), ಬಲ್ಲೂರ, ಕೌಡಗಾಂವ, ಗಡಿಕುಶನೂರ, ಖಾನಾಪುರ, ಸೋರಳ್ಳಿ, ವಡಗಾಂವ, ಬೇಲೂರ, ಆಲೂರ, ಜಂಬಗಿ, ಶೆಂಬೆಳ್ಳಿ, ವಲ್ಲೇಪುರ ಮೊದಲಾದ ಕಡೆ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net