ಧರ್ಮಸ್ಥಳ ಯೋಜನೆಯಿಂದ ಸೌಲಭ್ಯ

Bavagi
Published on

ಬೀದರ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಸಾಕಷ್ಟು ಸೌಲಭ್ಯ ಸಿಗುತ್ತಿವೆ. ಸರ್ಕಾರ ನಿರ್ವಹಿಸಬೇಕಾದ ಕೆಲಸಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜನೆಯಡಿ ಹಾಕಿಕೊಂಡು ಗ್ರಾಮೀಣ ಜನರ ಜೀವನ ಸುಧಾರಣೆ ಮಾಡಲಾಗುತ್ತಿದೆ ಎಂದು ಭದ್ರೇಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಬಾವಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮದಡಿ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಅವರು, ಜನ ಸರ್ಕಾರಿ ಕಚೇರಿಗಳ ಮೊರೆ ಹೋಗುವುದಕ್ಕಿಂತ ಧರ್ಮಸ್ಥಳ ಯೋಜನೆ ಕಚೇರಿಗೆ ಹೆಚ್ಚಾಗಿ ಹೋಗುತ್ತಿರುವುದು ದೊಡ್ಡ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಕುಟುಂಬಕ್ಕೆ ಶೌಚಗೃಹ, ಕೃಷಿ ಪರಿಕರ, ಶುದ್ಧ ನೀರು ಸೇರಿ ನಾನಾ ಸೌಲಭ್ಯಗಳನ್ನು ನೀಡುತ್ತಿರುವ ಕಾರಣ ಹಳ್ಳಿ ಜನರ ಬದುಕು ಹಸನು ಮಾಡಲು ಧರ್ಮಸ್ಥಳ ಯೋಜನೆ ನಾನಾ ಕಾರ್ಯಕ್ರಮ ಹಾಕಿಕೊಂಡಿದ್ದು ಶ್ಲಾಘನೀಯ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಸಂಜಯ ನಾಯಕ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಾಂತವೀರ ಹಜ್ಜರ್ಗೆ, ಸದಸ್ಯ ಸಂಗಮೇಶ ಹಜ್ಜರ್ಗೆ, ಕಾಶೀನಾಥ, ಗುಂಡಯ್ಯ ಸ್ವಾಮಿ, ರೇವಣಪ್ಪ ಭದ್ರಣ್ಣ, ಸಂಗಮೇಶ ಬಾಪುರ, ಯೋಜನೆ ಸಮನ್ವಯ ಅಕಾರಿ ಮಮತಾ, ಸೇವಾ ಪ್ರತಿನಿಧಿ ಗೀತಾ ನೆಲವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net