ಅಂಜಲಿ ಹಂತಕನ ಎನ್ ಕೌಂಟರ್ ಮಾಡಿ

tokari koli
Published on

ಬೀದರ್: ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹಂತಕನ ಎನ್ ಕೌಂಟರ್ ಜತೆಗೆ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಟೋಕರಿ ಕೋಲಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಪ್ರಮುಖರು, ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಕೊಲೆಯಾದ ಅಂಜಲಿ ಮತ್ತು ಅವರ ತಾಯಿ ಠಾಣೆಗೆ ಹೋದಾಗ ಪೊಲೀಸರು ಸ್ಪಂದಿಸಿದರೆ ಈ ಘಟನೆ ನಡೆಯುತ್ತಿರಲಿಲ್ಲ. ಇಂಥ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ಹಂತಕ ವಿಶ್ವನಾಥ ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಮನೆಗೆ ತೆರಳಿ ಜಾಕುವಿನಿಂದ ಇರಿದು ಕೊಲೆಗೈದಿರುವುದು ಇಡೀ ಮನುಕುಲ ತಲೆತಗ್ಗಿಸುವಂತೆ ಮಾಡಿದೆ. ಇಂಥ ಘಟನೆ ಪದೇಪದೆ ನಡೆಯುತ್ತಿರುವುದು ಆತಂಕಕಾರಿ ಎಂದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಈಚೆಗೆ ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಹೀನಾಯ ಘಟನೆ ನಡೆದಿರುವುದು ದುರಂತ. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಹಂತಕರು ಮತ್ತು ಬಲಾತ್ಕಾರಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.
ಟೋಕರಿ ಕೋಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಪ್ರಮುಖರಾದ ಸುನೀಲ ಖಾಶೆಂಪುರ, ಪಾಂಡುರಂಗ ಗುರೂಜಿ, ಶಿವರಾಜ ಬಂಬುಳಗಿ, ರಮೇಶ ಖಾಶೆಂಪುರ, ಷನ್ಮುಖಪ್ಪ ಶೇಕಾಪುರ, ಸಿದ್ದು ಖಾಶೆಂಪುರ, ಅರುಣಕುಮಾರ ಅಕರ್ಿ, ಲಾಲಪ್ಪ ಕೋರಿ, ಕಿರಣ ಕೌಠಾ, ವಿಶ್ವನಾಥ ಕೌಠಾ, ನಾಗೇಶ ವಾಲಿಕಾರ, ಶ್ರೀಕಾಂತ ಬಸಂತಪುರೆ ಇತರರಿದ್ದರು.
ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಕಾರಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net