ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ

photos
Published on

ಬೀದರ್: ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯ ಮುಖಂಡ ಗುರುನಾಥ ಜ್ಯಾಂತಿಕರ್ ಅವರಿಗೆ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ್ ಆರೋಪಿಸಿದರು.
35 ವರ್ಷಗಳಿಂದ ಬಿಜೆಪಿ, ಆರ್ಎಸ್ಎಸ್ ಹಾಗೂ ಸಹಕಾರ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸುತ್ತಿರುವ ಜ್ಯಾಂತಿಕರ್ ಅವರನ್ನು ಬಿಜೆಪಿ ವರಿಷ್ಠರು ಈ ಎಲೆಕ್ಷನ್ನಲ್ಲಿ ಕಡೆಗಣಿಸಿದ್ದು, ಸ್ವತಂತ್ರವಾಗಿ ಸ್ಪರ್ಧಿಸಿದರೆ ಎಲ್ಲ ಸೌಹಾರ್ದ ಸಂಘಗಳು ಸಹಕಾರ ನೀಡಲಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಕ್ಕೂಟದ ಪ್ರಮುಖ ಜಗನ್ನಾಥ ಕರಂಜೆ ಮಾತನಾಡಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗುರುನಾಥ ಜ್ಯಾಂತಿಕರ್ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಹಿಂಜರಿಯಬಾರದು ಎಂದರು.
ಪ್ರಮುಖರಾದ ನಾಗಶೆಟ್ಟಿ ಪಾಟೀಲ್, ಡಾ.ಅಣ್ಣಾರಾವ ನಾವದಗೇರೆ, ಸಂಜೀವಕುಮಾರ ಸಜ್ಜನ್, ಬಸವ ಪ್ರಕಾಶ, ಅಮೃತರಾವ ಹೊಸಮನಿ, ವೀರಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net