

ಬೀದರ್: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಾಗಿದ್ದು, ಇಂಧನ ಉಳಿತಾಯ ತುರ್ತು ಆದ್ಯತೆಯಾಗಬೇಕು ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ ಪಾಟೀಲ್ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಂಪ್/ಉಪಕರಣಗಳ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಿಗಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಹಯೋಗದಡಿ ಏರ್ಪಡಿಸಿದ್ದ ಇಂಧನ ದಕ್ಷತಾ ಕ್ರಮಗಳ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 480 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಬೀದರ್ ಜಿಲ್ಲೆ ನಂ.1 ಸ್ಥಾನದಲ್ಲಿದೆ ಎಂದರು.
ಕಮಲ್ ಸೋಲಾರ್ ಮುಖ್ಯಸ್ಥ ಮಲ್ಲಿಕಾರ್ಜುನ ಜೀವಣಗಿ ಮಾತನಾಡಿ, ವಿದ್ಯುತ್ ಉಳಿಸಲಿರುವ ಸೋಲಾರ್ ಬಳಕೆಗೆ ಸಾರ್ವಜನಿಕರು ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಪಾಲಿಟೆಕ್ನಿಕ್ ನ ಮಚ್ಛೇಂದ್ರ ಎಸ್. ಮಾತನಾಡಿ, ಆಧುನಿಕ ಜೀವನ ಪದ್ಧತಿ ಸಂಪೂರ್ಣ ವಿದ್ಯುತ್ ಮೇಲೆ ಅವಲಂಬಿಸಿದೆ. ಪ್ರಸ್ತುತ ಜಗತ್ತಿನ ವಿದ್ಯುತ್ ಶಕ್ತಿ ಬೇಡಿಕೆ ಶೇ.61.5 ಪಳೆಯುಳಿಕೆ ಇಂಧನಗಳಿಂದ ಪೂರೈಕೆಯಾಗುತ್ತಿದೆ. ಉಳಿದ ವಿದ್ಯುತ್ ಜಲ, ಪವನ, ಸೌರ, ಪರಮಾಣು ಮೂಲಗಳಿಂದ ಪಡೆಯಲಾಗುತ್ತಿದೆ. ಜಲವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯಲು ಅಪಾರ ಅರಣ್ಯನಾಶ ಹಾಗೂ ಭೂಮಿ ಮುಳುಗಡೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ನವೀಕರಿಸಬಹುದಾದ ವಿದ್ಯುತ್ ಮೂಲಗಳೇ ಇಂದಿನ ಅವಶ್ಯಕತೆಗಳಾಗಿವೆ ಎಂದರು.
ಸರ್ಕಾರಿ ಪಾಲಿಟೆಕ್ನಿಕ್ನ ಜಾಕೀರ್ ಹುಸೇನ್, ಗುರುನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನ ಡಾ.ನೀಲಶೆಟ್ಟಿ ಕೆ., ಉದ್ಯಮಿ ರಾಜು ಬೇಮಳಖೇಡಕರ್, ಬಕ್ಕಪ್ಪ ನಿರ್ಣಾಕರ್, ಅರುಣ ಮೊಕಾಶಿ, ಸದಾಶಿವಪ್ಪ ಬಿರಾದಾರ್, ಅಮಿತ್ ಜನವಾಡಕರ್ ಇತರರಿದ್ದರು.
ತರಬೇತಿ ಸಮಾರೋಪದಲ್ಲಿ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಪ್ರತಿಯೊಬ್ಬರೂ ಸೋಲಾರ್ ಅಳವಡಿಸಿಕೊಂಡು ವಿದ್ಯುತ್ ಉಳಿತಾಯ ಮಾಡಬೇಕು ಎಂದು ಕೋರಿದರು.
ಸಕರ್ಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ದೇವೇಂದ್ರಪ್ಪ ಹಂಚೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪ್ರಮಾಣಪತ್ರ ಪಡೆಯಲು ಭಾಗವಹಿಸದೆ ಜ್ಞಾನಾರ್ಜನೆಗಾಗಿ ತರಬೇತಿಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಕುಲಸಚಿವ ಶೇಖ್ ಸಿರಾಜುದ್ದೀನ್, ವಿಜಯಕುಮಾರ ಜಾಧವ್ ಮಾತನಾಡಿದರು. ಎಂ.ಪಟೇಲ್, ಶಿವಕುಮಾರ ಕಟ್ಟೆ, ಗೀತಾ ಪಾಟೀಲ್ ಇತರರಿದ್ದರು.