

ಬೀದರ್: ಜೆಸ್ಕಾಂ ಬೀದರ್ ಉಪವಿಭಾಗದ 11 ಕೆವಿ. ಮೈಲೂರ ಹಾಗೂ ಏರಫೋಸ್೯ ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ಗುರುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ನಗರದ ಹಕ್ ಕಾಲನಿ, ಹಳೆಯ ಮೈಲೂರ, ಕೆಇಬಿ ಕಾಲನಿ, ಕರೋಡಿಮಾಲ್ ಲೆಟಟ್, ಮೈಲೂರು ರಿಂಗ್ ರೋಡ್, ಶ್ರೀನಗರ, ಲ್ಯಾಂಡ್ ಆರ್ಮಿ ಪ್ರದೇಶ, ಹೊಸ ಆದರ್ಶ ಕಾಲನಿ, ಜನತಾ ಬಡಾವಣೆಯ, ಹಳೆಯ ಚಿದ್ರಿ, ಆಶಾ ಕಲ್ಯಾಣ ಮಂಟಪ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.