

ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ನಗರದ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಗಳಿಸಿ ಸಾಧನೆ ಮಾಡಿದೆ.
ಒಟ್ಟು 61 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 10 ವಿದ್ಯಾರ್ಥಿಗಳು ಅಗ್ರಶ್ರೇಣಿ, 36 ಪ್ರಥಮ ದರ್ಜೆ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ನರೇಶ್ ಮಲ್ಲಿಕಾರ್ಜುನ ಶೇ 95 ರಷ್ಟು ಅಂಕ ಪಡೆದು ಶಾಲೆಗೆ ಮೊದಲಿಗರಾಗಿದ್ದಾರೆ. ರಾಮಕೃಷ್ಣ ನಾಗನಾಥ ಶೇ 92.6, ಕನಿಷ್ಕಾ ಪ್ರಕಾಶ ಶೇ 91, ಪೃಥ್ವಿರಾಜ ನಾಗನಾಥ ಶೇ 91, ಶುಭಂ ಹೊಸಮನಿ ದೀಪಕ್ ಶೇ 90.2, ಸಂಜನಾ ಶಿವಕುಮಾರ ಬೇಲೂರೆ ಶೇ 88, ಸ್ನೇಹಾ ಶ್ರೀಶೈಲ್ ಪಾಟೀಲ ಶೇ 87.2, ರಿಷಿಕೇಶ ವೀರಶೆಟ್ಟಿ ಶೇ 87.2, ವೈಷ್ಣವಿ ಸಂಜುಕುಮಾರ ಶೇ 86.2, ಕೃಷ್ಣವೇಣಿ ಶರಣಪ್ಪ ಶೇ 86 ರಷ್ಟು ಅಂಕ ಪಡೆದು ಸಾಧನೆಗೈದಿದ್ದಾರೆ.
ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಶಾಲೆಗೆ ಶೇ 100 ರಷ್ಟು ಫಲಿತಾಂಶ ಬಂದಿದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪೂಜ್ಯ ಶ್ರೀ ಅವಧೂತಗಿರಿ ಮಹಾರಾಜ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಶಾಂತಾಬಾಯಿ ಯರಮಲ್ಲಿ, ರವಿ ಮಲಸಾ, ಬಸವರಾಜ ದೇಗಲಮಡಿ, ಪ್ರಾಚಾರ್ಯೆ ಮಹಾದೇವಿ ಬೀದೆ ಹಾಗೂ ಶಿಕ್ಷಕರು ಪ್ರಶಂಸಿಸಿದ್ದಾರೆ.