ಶಂಕರಾಚಾರ್ಯ ಅಪ್ರತಿಮ ದಾರ್ಶನಿಕ

shankaracharya jayanti
Published on

ಬೀದರ್: ಜಗದ್ಗುರು ಆದಿ ಶಂಕರಾಚಾರ್ಯರು ಪ್ರಪಂಚದ ಅಪ್ರತಿಮ ದಾರ್ಶನಿಕರು. ವಿನಾಶದತ್ತ ಸಾಗಿದ್ದ ಹಿಂದು ಧರ್ಮವನ್ನು ಮರು ಪ್ರತಿಷ್ಠಾಪಿಸಿದ ಮಹಾನ್ ಚೇತನ ಎಂದು ನಿವೃತ್ತ ಉಪನ್ಯಾಸಕ ಶಾಮಕಾಂತ ಕುಲಕರ್ಣಿ ಬಣ್ಣಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿ, ಹಿಂದು ಧರ್ಮ ಸಂಕಷ್ಟದಲ್ಲಿದ್ದಾಗ ದೇಶದ ನಾಲ್ಕು ಮೂಲೆಗಳಲ್ಲಿ ಶಕ್ತಿಪೀಠ ಸ್ಥಾಪಿಸುವ ಮೂಲಕ ಸನಾತನ ಧರ್ಮವನ್ನು ಶಂಕರಾಚಾರ್ಯರು ಉಳಿಸಿದ್ದಾರೆ. ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಹಿಂದು ಧರ್ಮದ ಪ್ರಚಾರ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದರು.
ಮುಖಂಡ ವಿಜಯಕುಮಾರ ವಿಶ್ವಕರ್ಮ ಮಾತನಾಡಿ, ಅಲ್ಪ ಸಮಯದ ಜೀವಿತಾವಯಲ್ಲೇ ದೇಶಕ್ಕೆ ಅಪಾರ ಕೊಡುಗೆ ನೀಡಿದ ಶಂಕರರ ಜಯಂತಿ ಆಚರಿಸಿದರೆ ಸಾಲದು, ಪ್ರತಿಯೊಬ್ಬರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಕಿರಣಕುಮಾರ ಅವರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಬ್ರಾಹ್ಮಣ ಮಹಾ ಸಂಘದ ಅಧ್ಯಕ್ಷ ರಮೇಶ ಕುಲಕರ್ಣಿ, ನಗರಸಭೆ ಮಾಜಿ ಅಧ್ಯಕ್ಷೆ ಚಂದ್ರಕಲಾ ವಿಶ್ವಕರ್ಮ, ಮಾಜಿ ಸದಸ್ಯ ಮನೋಹರ ದಂಡೆ, ಪ್ರಮುಖರಾದ ಬಾಬುರಾವ ಕುಲಕರ್ಣಿ, ಅನಂತ ಕುಲಕರ್ಣಿ, ಕೇದಾರ ದೇಶಪಾಂಡೆ, ಪುರುಷೋತ್ತಮ ಪುರೋಹಿತ, ಪ್ರಶಾಂತ ವಿಶ್ವಕರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net