

ಬೀದರ್: ನಗರದ ಹೊರವಲಯದ ಗೋರನಳ್ಳಿ ಹತ್ತಿರದ ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಎರಡು ದಿವಸ ಟೆಕ್ನೋ ಉತ್ಸವ ಅದ್ದೂರು, ಅರ್ಧಪೂರ್ಣವಾಗಿ ಜರುಗಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಾನಾ ಯೋಜನೆಗಳು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಾಚಾರ್ಯೆ ಡಾ.ವಿನೀತಾ ಪಾಟೀಲ್ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ, ಪೂಜ್ಯ ಚಿರಂಜೀವಿ ದೊಡಪ್ಪ ಆಶೀರ್ವಾದದಿಂದ ಸಂಸ್ಥೆ ಉನ್ನತ ಸ್ಥಾನದಲ್ಲಿ ಬೆಳೆಯುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಸಂಸ್ಥೆ ನಿರ್ದೇಶಕ ಶರಣಬಸವಪ್ಪ ದೇಶಮುಖ ಮಾತನಾಡಿದರು. ಯುಪಿಎಸ್ಸಿಯಲ್ಲಿ 756ನೇ ರಾಂಕ್ ಪಡೆದ ಕಾಲೇಜಿನ ಹಳೆಯ ವಿದ್ಯಾರ್ಥಿ ಲಖನ್ ಸಿಂಗ್, ಪಿಎಚ್.ಡಿ ಪಡೆದ ಸಂಸ್ಥೆಯ ಉಪನ್ಯಾಸಕ ಡಾ.ಬಸವಲಿಂಗ ಶಾಸ್ತ್ರ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶರಣಬಸವ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಸತೀಶ್ ಪ್ರತಾಪೂರ, ಕುಮಾರ ದೇಶಮುಖ, ಅನೀಲ ಚಿಲ್ಲರ್ಗಿ, ಡಾ.ವಿವೇಕ ಜಲಾದಿ, ಡಾ.ವಿಜಯಾನಂದ ಇತರರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಆಟ, ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.