ಮೆರಗು ಹೆಚ್ಚಿಸಿದ ಅದ್ದೂರಿ ಮೆರವಣಿಗೆ

Basav Jayanti 2
Published on

ಬೀದರ್: ಬಸವ ಜಯಂತಿ ಉತ್ಸವ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು.
ಅತ್ಯಾಕರ್ಷಕ ಪುಷ್ಪಗಳಿಂದ ಅಲಂಕೃತ ಸಾರೋಟಿನಲ್ಲಿ ಮಹಾತ್ಮ ಬಸವೇಶ್ವರರ ಭಾವಚಿತ್ರ ಮತ್ತು ವಚನ ಸಾಹಿತ್ಯ ಇರಿಸಲಾಗಿತ್ತು. ಸಾರೋಟು ನೋಡುಗರ ಗಮನ ಸೆಳೆಯುವಂತೆ ಶೃಂಗರಿಸಲಾಗಿತ್ತು. ಮೆರವಣಿಗೆಯಲ್ಲಿ ಡಿಜೆ ಸೌಂಡ್ನಿಂದ ಮಾರ್ದನಿಸುತ್ತಿದ್ದ ವಚನ ಸಂಗೀತದ ಝೇಂಕಾರಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಬಾ ಬಸವಣ್ಣ, ಬಾರೋ ಬಸವಣ್ಣ ಎಂಬ ಹಾಡು ಡಾನ್ಸ್ ಮಾಡುವವರಿಗೆ ಫೇವರಿಟ್ ಎನಿಸಿತ್ತು. ಪೂಜಾ ಕುಣಿತ, ಕೋಲಾಟ, ಡೊಳ್ಳು, ವೀರಗಾಸೆ, ಕೊಲ್ಹಾಪುರ ಝಾಂಜ್ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆ ಸೊಬಗು ಹೆಚ್ಚಿಸಿದವು.
ವಚನ ಪಠಣದ ಮೂಲಕ ಬಸವೇಶ್ವರ ವೃತ್ತದ ಹತ್ತಿರ ಪೌರಾಡಳಿತ ಸಚಿವ ರಹೀಮ್ ಖಾನ್ ಮೆರವಣಿಗೆಗೆ ಚಾಲನೆ ನೀಡಿದರು. ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಸಾಯಗಾಂವನ ಶ್ರೀ ಶಿವಾನಂದ ಸ್ವಾಮಿ, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಶ್ರೀ ಪ್ರಭು ದೇವರು, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾಥ ಕೊಳ್ಳುರ್, ರಾಜೇಂದ್ರಕುಮಾರ ಗಂದಗೆ, ಸೋಮಶೇಖರ ಪಾಟೀಲ್ ಗಾದಗಿ, ಶರಣಪ್ಪ ಮಿಠಾರೆ, ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರ, ಡಾ.ರಜನೀಶ್ ವಾಲಿ, ವಿರೂಪಾಕ್ಷ ಗಾದಗಿ, ದೀಪಕ್ ವಾಲಿ, ವಿವೇಕ್ ವಾಲಿ, ಆದೀಶ್ ವಾಲಿ, ಅಶೋಕ ಕರಂಜಿ, ಮಾರುತಿ ಬೌದ್ಧೆ, ಪಂಡಿತ ಚಿದ್ರಿ, ಅಮೃತರಾವ ಚಿಮಕೋಡೆ, ವಿಜಯಕುಮಾರ ಸೋನಾರೆ, ಶಕುಂತಲಾ ಬೆಲ್ದಾಳೆ, ಗೀತಾ ಚಿದ್ರಿ, ಇತರರಿದ್ದರು.
ವಚನ ಸಂಗೀತಕ್ಕೆ ಗಣ್ಯರು ಹೆಜ್ಜೆ ಹಾಕಿ ಮೆರವಣಿಗೆಕಾರರಿಗೆ ಜೋಶ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net