

ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ವಿದ್ಯಾರಣ್ಯ ಪ್ರೌಢ ಶಾಲೆಯ ವಿದ್ಯಾರ್ಥಿ ಗಣೇಶ ದತ್ತಾತ್ರಿ ರೂಪನೋರೆ 625ಕ್ಕೆ 610 ಅಂಕ ಪಡೆದು ಗಮನ ಸೆಳೆದಿದ್ದಾನೆ.
ತಾಲೂಕಿನ ಶ್ರೀಮಂಡಲ ನಿವಾಸಿಯಾದ ಗಣೇಶ ಕನ್ನಡ ವಿಷಯದಲ್ಲಿ 124, ಇಂಗ್ಲಿಷ್ 94, ಹಿಂದಿ 100, ಗಣಿತ 99, ವಿಜ್ಞಾನ 96 ಹಾಗೂ ಸಮಾಜ ವಿಜ್ಞಾನ 97 ಅಂಕ ಪಡೆದಿದ್ದಾನೆ.
ವಿದ್ಯಾರ್ಥಿ ಗಣೇಶ ಸಾಧನೆಗೆ ಪಾಲಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.