ಬಸವ ಜಯಂತಿಗೆ ಕೋಲಾಟ ಮೆರಗು

gumme colony
Published on

ಬೀದರ್: ಅಕ್ಕನಾಗಮ್ಮ ಸಾಂಸ್ಕೃತಿಕ ಸಂಘ ಹಾಗೂ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ವತಿಯಿಂದ ನಗರದ ಗುಮ್ಮೆ ಬಡಾವಣೆಯ ಶ್ರೀ ಹನುಮಾನ ಮಂದಿರದಲ್ಲಿ ಶುಕ್ರವಾರ ಸಂಭ್ರಮದಿಂದ ಬಸವ ಜಯಂತಿ ಆಚರಿಸಲಾಯಿತು.
ಧ್ವಜಾರೋಹಣ, ಗುರು ಬಸವ ಪ್ರಾರ್ಥನೆ ಮತ್ತು ತೊಟ್ಟಿಲು ಕಾರ್ಯಕ್ರಮ ಜರುಗಿತು. ಉಪನ್ಯಾಸ ನೀಡಿದ ಪ್ರೊ.ಉಮಾಕಾಂತ ಮೀಸೆ, 12ನೇ ಶತಮಾನದಲ್ಲಿ ಸ್ತ್ರೀ ಸಮಾನತೆ, ಜಾತಿರಹಿತ ಸಮಾಜ, ಕಾಯಕ-ದಾಸೋಹ ಸಿದ್ಧಾಂತ, ಸಮಾನತೆ ಸಮಾಜವನ್ನು ಬಸವಾದಿ ಶರಣರು ನಿರ್ಮಿಸಿದ್ದಾರೆ. ವಚನಗಳ ಮೂಲಕ ಮೊದಲ ಬಾರಿಗೆ ಜಗತ್ತಿಗೆ ಸಮಾಜನತೆ ಸಂದೇಶವನ್ನು ಶರಣರು ನೀಡಿದ್ದಾರೆ ಎಂದರು.
ಜಯಂತಿಯ ಅಂಗವಾಗಿ ಮಹಿಳಾ ಕಲಾವಿದರಿಂದ ಆಕರ್ಷಕ ಕೋಲಾಟ ಪ್ರದರ್ಶನ ನಡೆಯಿತು. ವಚನಗಳ ಆಧಾರದ ಮೇಲೆ ಕೋಲಾಟ ನಡೆಯಿತು. ವೈಷ್ಣೋದೇವಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ್, ಪ್ರಮುಖರಾದ ಗುರುನಾಥ ಬಿರಾದಾರ್, ಧೂಳಪ್ಪ ಜೊತೆಪ್ಪನೋರ್, ಧನಶೆಟ್ಟಿ ಮದರಗಾಂವೆ, ರವಿ ಮೂಲಗೆ, ಬಸವರಾಜ, ನೂರಂದಪ್ಪ, ಸಿದ್ರಾಮಯ್ಯ ಹಿರೇಮಠ, ಶಿವಕುಮಾರ, ಮಡೆಪ್ಪ, ರಾಜಕುಮಾರ, ಗಣಪತಿ, ಲಕ್ಷ್ಮಿಬಾಯಿ ಬಿರಾದಾರ್, ಗೀತಾ ಪಾಟೀಲ್, ಶ್ರೀದೇವಿ ಬಿರಾದಾರ್, ಮಹಾದೇವಿ ಬಿರಾದಾರ್, ಭಾರತಿ ಬಿರಾದಾರ್, ರೇಖಾ, ಕವಿತಾ ಸ್ವಾಮಿ, ಜ್ಯೋತಿ ನಿನ್ನೆ, ಮಲ್ಲಮ್ಮ ಬಿರಾದಾರ್, ವಿಜಯಲಕ್ಷ್ಮಿ ಮೂಲಗೆ, ಸಂಗೀತಾ ಪಾಟೀಲ್, ಕಲ್ಪನಾ, ಕಾವ್ಯ ಬಿರಾದಾರ್, ಸಂಗೀತಾ ದಾನಿ, ಶಶಿಕಲಾ ಗಾದಗಿ, ಮಹಾನಂದಾ ಕೋಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net