

ಬಸವಕಲ್ಯಾಣ: ತಾಲೂಕಿನ ಮಂಠಾಳ ಗ್ರಾಮದ ವಿದ್ಯಾ ವಿಕಾಸ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ.100ರಷ್ಟು ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ 96.29 ರಷ್ಟು ಫಲಿತಾಂಶ ಬಂದಿದೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 34 ವಿದ್ಯಾರ್ಥಿಗಳಲ್ಲಿ ಅಗ್ರಶ್ರೇಣಿ-7, ಪ್ರಥಮ ದಜರ್ೆ-14, ದ್ವಿತೀಯ-11, ತೃತೀಯ-2 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 54 ವಿದ್ಯಾರ್ಥಿಗಳಲ್ಲಿ ಅಗ್ರಶ್ರೇಣಿ-18, ಪ್ರಥಮ-28, ದ್ವಿತೀಯ-4, ತೃತೀಯ-2 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ರುದ್ರಾಣಿ ಡಿ. ಶೇ.97.44, ಶಿವಲಿಂಗ ಬಿ. ಶೇ.96.48, ನಿಖಿಲರಡ್ಡಿ ವಿ. ಶೇ.94.48, ಶಿವಾನಿ ಜಿ. ಶೇ.94.48, ಗುರುನಾಥ ಬಿ. ಶೇ.93.44, ಲಕ್ಷ್ಮಿ ಎನ್. ಶೇ.92.96, ಸಾಯಿನಾಥ ಎಸ್. ಶೇ.91.02, ಮಹೇಶ ಎಸ್. ಶೇ.90.72ರಷ್ಟು ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯಗುರು ಹರ್ಷ.