ನವೀನ್ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

Priyanka
Published on

ಬೀದರ್: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ನವೀನ್ ಪಬ್ಲಿಕ್ ಶಾಲೆಯು ಶೇ 100ಕ್ಕೆ 100 ರಷ್ಟು ಫಲಿತಾಂಶ ಗಳಿಸಿ ಗಮನ ಸೆಳೆದಿದೆ.
ಪರೀಕ್ಷೆ ಬರೆದ ಎಲ್ಲ 9 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇಬ್ಬರು ಅಗ್ರಶ್ರೇಣಿ, ನಾಲ್ವರು ಪ್ರಥಮ ದರ್ಜೆ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಪ್ರಿಯಾಂಕಾ ಶೇ 90, ವೈಷ್ಣವಿ ಕೆ. ಶೇ 86.08, ಭಾಗ್ಯಶ್ರೀ ಶೇ 83, ಅಶ್ವಿನಿ ಆರ್. ಶೇ 81 ರಷ್ಟು ಅಂಕ ಗಳಿಸಿ ಸಾಧನೆ ತೋರಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net