ಜೀಜಾಮಾತಾ ಪ್ರೌಢಶಾಲೆಗೆ ಎರಡು ಅಗ್ರಶ್ರೇಣಿ

Jeeja maata School SSLC Achievers Sanman Photo
Published on

ಬೀದರ್: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಯರು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ದುರ್ಗಾ ವೀರಶೆಟ್ಟಿ ಶೇ 88 ಹಾಗೂ ರಾಜೇಶ್ವರಿ ಶೇ 86 ಅಂಕ ಗಳಿಸಿದ್ದಾರೆ. 10 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಸಹ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿನ ವಿದ್ಯಾರ್ಥಿನಿಯರ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿ ಸತೀಶ ಮುಳೆ ಪ್ರಶಂಸಿಸಿದ್ದಾರೆ.
ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರೌಢಶಾಲೆ ಮುಖ್ಯಶಿಕ್ಷಕ ಅರ್ಜುನ ಧೂಳೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಾಸುದೇವ ರಾಠೋಡ್, ಶಿಕ್ಷಕರಾದ ರಾಜಕುಮಾರ, ಅನಿಲಕುಮಾರ, ಸಂಜಯ್ ಪಾಟೀಲ, ಆನಂದ ಜಾಧವ್, ನಾಗರತ್ನಮ್ಮ, ತಾನಾಜಿ, ಮಲ್ಲಿಕಾರ್ಜುನ, ಭೀಮಷಾ, ಕುಮಾರಸ್ವಾಮಿ, ಸುರೇಶ ಅಂಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net