

ಬೀದರ್: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಪ್ರತಾಪನಗರದ ಜನಸೇವಾ ಪ್ರೌಢಶಾಲೆಗೆ ಶೇ 99 ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳ ಪೈಕಿ 37 ಮಂದಿ ಪಾಸಾಗಿದ್ದಾರೆ.
10 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆಗೈದಿದ್ದಾರೆ. ಮಹೇಶ ಪಿ ಶೇ 94.24, ಋತುಜಾ ಶೇ 90.88 ಹಾಗೂ ಅಭಿಷೇಕ ಶೇ 90.01 ರಷ್ಟು ಅಂಕ ಪಡೆದಿದ್ದಾರೆ.
ಭಾರತೀಯ ಸಂಸ್ಕøತಿ ಆಧಾರಿತ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕೊಂಡಾಡಿದ್ದಾರೆ.