ಖೂಬಾ ವಿರುದ್ಧ ಕೇಸ್ ದಾಖಲು

Bhagavant Khuba
Published on

ಬೀದರ್: ಶಟ್೯ ಮೇಲೆ ಪಕ್ಷದ ಕಮಲ ಚಿಹ್ನೆ ಧರಿಸಿಕೊಂಡು ಬಂದು ಮತದಾನ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಪ್ರಕರಣ ದಾಖಲಾಗಿದೆ.
ಔರಾದ್ ಪಟ್ಟಣದ ನಲಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಮತದಾನಕ್ಕೆ ಆಗಮಿಸಿದ ಖೂಬಾ ಅವರು ತಮ್ಮ ಶಟ್೯ನ ಮೇಲೆ ಬಿಜೆಪಿ ಪಕ್ಷದ ಚಿಹ್ನೆ (ಬ್ಯಾಡ್ಜ್) ಧರಿಸಿಕೊಂಡು ಮತದಾನ ಮಾಡಿದ್ದಾರೆ. ಅಲ್ಲದೆ ಮತಗಟ್ಟೆ ಕೇಂದ್ರದ 100 ಮೀಟರ್ ಒಳಗಡೆ ಮಾಧ್ಯಮದವರ ಜತೆಯಲ್ಲಿ ಬ್ಯಾಡ್ಜ್ ಧರಿಸಿಕೊಂಡು ಮಾತನಾಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ದೂರು ನೀಡಿದ ಅನ್ವಯ ಖೂಬಾ ವಿರುದ್ಧ ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net