ಹಿರಿಯ ಕಲಾವಿದ ಗುಮ್ಮಾಗೆ ತುಲಾಭಾರ

aliamber
Published on

ಬೀದರ್: ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಪವಾಡಪುರುಷ ಶ್ರೀ ವೀರಭದ್ರಪ್ಪ ಅಪ್ಪನವರ 77ನೇ ಜಾತ್ರಾ ಮಹೋತ್ಸವವು ಶೃದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮಂದಿರದಲ್ಲಿ ಒಂದು ವಾರ ವಿವಿಧ ಧಾಮರ್ಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂದಿರದಲ್ಲಿರುವ ಶ್ರೀ ವೀರಭದ್ರಪ್ಪನವರ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಒಂದು ವಾರ ಪ್ರತಿನಿತ್ಯ ರಾತ್ರಿ ಪೂಜ್ಯರು, ಚಿಂತಕರು, ಉಪನ್ಯಾಸಕರಿಂದ ಅರ್ಥಪೂರ್ಣ ಪ್ರವಚನ ನಡೆದವು. ನಿತ್ಯವೂ ಒಂದೊಂದು ಗ್ರಾಮಗಳ ತಂಡದಿಂದ ವಿಶಿಷ್ಟ ಭಜನೆ ಜರುಗಿತು.
ಶ್ರೀ ಬಾಬುರಾವ ಮಲ್ಕಾಪುರ ಮಹಾರಾಜರ ದಿವ್ಯ ಸಾನ್ನಿಧ್ಯ, ಶಿವಣಿ ಮತ್ತು ಹಲಬಗರ್ಾದ ಶ್ರೀ ಹಾವಗಿಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಭಜನೆ ನಡೆಸಿಕೊಟ್ಟರು. ಜಾತ್ರೆ ಅಂಗವಾಗಿ ಗಂಗಾಧರ ಮಠದಿಂದ ಬಾಜಾ, ಭಜಂತ್ರಿಯೊಂದಿಗೆ ಗಂಗಾಪೂಜೆ ಮಾಡಿ ತುಂಬಿದ ಕಳಸಗಳೊಂದಿಗೆ ಮಹಿಳೆಯರು ಮಂದಿರಕ್ಕೆ ಆಗಮಿಸಿದರು. ನಂತರ ಪೂಜ್ಯರ ಗದ್ದುಗೆಗೆ ಮಹಾ ರುದ್ರಾಭಿಷೇಕ ಮತ್ತು ಸಂಜೆ ಧೂನಿ ಪೂಜೆ ನಡೆಯಿತು. ಗ್ರಾಮದಲ್ಲಿ ವೈಭವದಿಂದ ಶ್ರೀ ವೀರಭದ್ರಪ್ಪನವರ ಮೆರವಣಿಗೆ ಜರುಗಿತು.ಕೊನೇ ದಿನ ಜಂಗಿ ಕುಸ್ತಿ ನಡೆದವು.
ತುಲಾಭಾರ ಸಂಭ್ರಮ: ಕಳೆದ ಐವತ್ತು ವರ್ಷಗಳಿಂದ ಮಂದಿರದಲ್ಲಿ ಸೇವೆಗೈಯುತ್ತಿರುವ ಜಿಲ್ಲೆಯ ಹಿರಿಯ ತಬಲಾ ವಾದಕರಾದ ಕಲ್ಯಾಣರಾವ ಪಾಟೀಲ್ ಗುಮ್ಮಾ ಅವರಿಗೆ ತುಲಾಭಾರ ಮಾಡಿ ಗೌರವಿಸಲಾಯಿತು.
ಕಲ್ಯಾಣರಾವ ಪಾಟೀಲ್ ಬೀದರ್ ಜಿಲ್ಲೆಯ ಪ್ರಖ್ಯಾತ ತಬಲಾವಾದಕರು. ಐವತ್ತು ವರ್ಷಗಳಿಂದ ಇವರು ಅಲಿಯಂಬರ್ ಮಂದಿರದಲ್ಲಿ ಸಂಗೀತ ಸೇವೆ ನೀಡುತ್ತಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ಷಷ್ಠಿ ದಿನ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಯಾಣರಾವ ಪಾಟೀಲ್ ಭಾಗವಹಿಸುತ್ತಾರೆ. ಇವರ ಐದು ದಶಕದ ಸಾರ್ಥಕ ಸೇವೆಗೆ ಮಂದಿರದವರು ಮನ್ನಣೆ ನೀಡಿ ತುಲಾಭಾರ ಮಾಡಿ ಅಭಿನಂದಿಸಿದರು.
ಕಲ್ಯಾಣರಾವ ಪಾಟೀಲ್ ಪಂ.ಪುಟ್ಟರಾಜ ಗವಾಯಿ ಸೇರಿದಂತೆ ಅನೇಕ ಪ್ರಶಸ್ತಿ, ಸಮ್ಮಾನಕ್ಕೆ ಭಾಜನರಾಗಿದ್ದಾರೆ. ಅನೇಕ ತಬಲಾ ವಾದಕರಿಗೆ ಸಮಾಜಕ್ಕೆ ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ. 75ರ ಹರೆಯದ ಇವರು ಮೂಲತಃ ತಾಲೂಕಿನ ಗುಮ್ಮಾ ಗ್ರಾಮದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net