ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

congress serpade
Published on

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖ ಪಕ್ಷಕ್ಕೆ ಸೇರಿದರು.
ಜೆಡಿಎಸ್ ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಗಣಪತಿ ಕಮಠಾಣ, ಎಂ.ಡಿ. ಜಾವೀದ್ ಎಂ.ಡಿ. ವಸೀಂ, ಧನರಾಜ, ನಾಗೇಶ, ಶರಣಪ್ಪ, ಮಹೇಶ, ಸೋಮನಾಥ, ಸನ್ನಿ ಕೋಟೆ, ಅಶೋಕ ಶಾದ್ರಕ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರಲ್ಲಿ ಪ್ರಮುಖರು. ಜಿಪಂ ಮಾಜಿ ಸದಸ್ಯರಾದ ಭೀಮಣ್ಣ ಕೊಳ್ಳೆ, ವಿಜಯಕುಮಾರ ಖಾಶೆಂಪುರ, ನಗರಸಭೆ ಸದಸ್ಯ ಹಣಮಂತ ಮಲ್ಕಾಪುರ, ರಾಕೇಶ ಕುರುಬಖೇಳಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net