

ಬೀದರ್: ವಿಶ್ವಧರ್ಮ ಪ್ರವಚನ ಮಂಗಲೋತ್ಸವ ಹಾಗೂ ರಾಷ್ಟ್ರೀಯ ಬಸವದಳ ಚಿಕ್ಕಪೇಟ ಶಾಖೆ ಉದ್ಘಾಟನೆ ಕಾರ್ಯಕ್ರಮ ಮೇ 3ರಂದು ಚಿಕ್ಕಪೇಟದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಚಿಕ್ಕಪೇಟ ಬಸವ ಮಂಟಪ ನಿವೇಶನದಲ್ಲಿ 21 ದಿನ ಪ್ರವಚನ ಹಮ್ಮಿಕೊಂಡಿದ್ದು, ಮೇ 3ರಂದು ಅದ್ದೂರಿ ಮಂಗಲೋತ್ಸವ ಆಯೋಜಿಸಲಾಗಿದೆ. 2000ಕ್ಕೂ ಅಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಸವದಳ ಶಾಖೆಯನ್ನು ಡಾ.ಎಸ್.ಎಸ್. ಸಿದ್ದಾರಡ್ಡಿ ಫೌಂಡೇಷನ್ ಅಧ್ಯಕ್ಷೆ ಡಾ.ಗುರಮ್ಮ ಸಿದ್ದಾರಡ್ಡಿ ಉದ್ಘಾಟಿಸುವರು. ಬಸವ ಮಂಟಪದ ಪೂಜ್ಯ ಸತ್ಯಾದೇವಿ ಮಾತೆ ಸಾನ್ನಿಧ್ಯ, ಮರಕಲ್ ಗ್ರಾಪಂ ಅಧ್ಯಕ್ಷೆ ಈಶ್ವರಮ್ಮ ಬಸವರಾಜ ಓಂಕಾರೆ ಅಧ್ಯಕ್ಷತೆ ವಹಿಸುವರು. ತೆಲಂಗಾಣ ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ವಿಜಯಕುಮಾರ ಪಟ್ನೆ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಮಾಳಪ್ಪ ಅಡಸಾರೆ, ಡಾ.ರಾಜಕುಮಾರ ಹೆಬ್ಬಾಳೆ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಪ್ರಮುಖರಾದ ಶಿವರಾಜ ಪಾಟೀಲ್ ಅತಿವಾಳ, ಅಶೋಕ ಪಾಟೀಲ್, ಬಸವಂತರಾವ ಬಿರಾದಾರ್, ಬಸವರಾಜ ಪಾಟೀಲ್, ಮಲ್ಲಿಕಾರ್ಜುನ ಜೈಲರ್, ನಾಗಶೆಟ್ಟಿ ರಾಂಪುರೆ, ಶಶಿಕುಮಾರ ಪಾಟೀಲ್, ಶಂಕರ ಪಾಟೀಲ್, ರವಿಕಾಂತ ಬಿರಾದಾರ್ ಇತರರಿದ್ದರು.