

ಬೀದರ್: ಹಲವು ಭರವಸೆ ನೀಡಿ ಹತ್ತು ವರ್ಷ ಹಿಂದೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಬದಲಾಗಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.
ಮೋದಿ ಆಡಳಿತದಲ್ಲಿ ರೈತರ ಆದಾಯ ದುಪ್ಪಟ್ಟಾಗಲಿಲ್ಲ. ಬದಲಿಗೆ ಕೃಷಿ ಸಬ್ಸಿಡಿ ಕಡಿತಗೊಳಿಸಿ ಕೃಷಿ ಪರಿಕರಗಳ ಬೆಲೆ ಹೆಚ್ಚಿಸಿ ಅನ್ನದಾತರ ಸಂಕಷ್ಟ ಹೆಚ್ಚಿಸಿದರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ದೇಶದ ರೈತರ ಸಾಲ ಮನ್ನಾ ಮಾಡಲು 5 ಲಕ್ಷ ಕೋಟಿ ರೂ. ಸಾಕು. ಆದರೆ ಹಣವಿಲ್ಲ ಎಂಬ ಕಾರಣ ನೀಡಿ ಕೇಂದ್ರ ಸಕರ್ಾರ ಸಾಲ ಮನ್ನಾ ಮಾಡಲಿಲ್ಲ, ಆದರೆ ಕಾಪರ್ೋರೇಟ್ ಕಂಪನಿಗಳ 20 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಹತ್ತು ವರ್ಷದಲ್ಲಿ 1 ಲಕ್ಷದ 474 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ಸರಾಸರಿ 30 ರೈತರು ಬದುಕಿನ ಬಾಧೆ ತಾಳಲಾರದೆ ಸಾವಿಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸಾಂತ್ವಾನ ಹೇಳಲು ಮೋದಿ ಅವರಿಗೆ ಸಮಯವಿಲ್ಲ, ಆದರೆ ಅದಾನಿ ಮೊಮ್ಮಗನನ್ನು ನೋಡಲು ಸಮಯವಿತ್ತು ಎಂದು ದೂರಿದರು.
ರಾಜ್ಯಾದ್ಯಂತ ಹಿಂದೆಂದೂ ಕಂಡರಿಯದಂಥ ಬರ ಆವರಿಸಿದೆ. ಎನ್ಡಿಆರ್ಎಫ್ ನೀತಿ ಪ್ರಕಾರ ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಬರಬೇಕು. ಆದರೆ ಸ್ವಲ್ಪ ಅನುದಾನ ನೀಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, 1987ರಲ್ಲಿ ರಾಜ್ಯದಲ್ಲಿ ಗುಂಡೂರಾವ್ ಸಕರ್ಾರವಿದ್ದಾಗ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಗುಂಡೂರಾವ್ ಸಕರ್ಾರಕ್ಕೆ ನಮ್ಮ ಮತವಿಲ್ಲ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈಗಲೂ ಅದೇ ಮಾದರಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಮೋದಿ ಸಕರ್ಾರ ರೈತರಿಗೆ ಮಾಡಿದ ಮೋಸ ಅಷ್ಟಿಷ್ಟಲ್ಲ. ಸಂಸತ್ನಲ್ಲಿ ಮೂರು ಕೃಷಿ ಕಾಯ್ದೆ ಜಾರಿಗೆ ತಂದು ರೈತರ ಬದುಕು ನಾಶ ಮಾಡಿದೆ. ಇಂಥ ಸಕರ್ಾರ ಮತ್ತೆ ಅಧಿಕಾರಕ್ಕೆ ಬರಬಾರದೆಂದು ಮನೆ-ಮನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಂಘ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ಇಲ್ಲ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಸ್ವಾಮಿ, ಪ್ರಮುಖರಾದ ಕೊಂಡಿಬಾರಾವ ಪಾಂಡ್ರೆ, ಖಾಸೀಂ ಅಲಿ, ನಾಗಶೆಟ್ಟೆಪ್ಪ ಲಂಜವಾಡೆ, ಶಾಂತಮ್ಮ ಮೂಲಗೆ, ಕರಬಸಪ್ಪ ಹುಡಗಿ, ಖಾನ್ ಸಾಬ್, ವೀರಾರಡ್ಡಿ ಪಾಟೀಲ್, ಷನ್ಮುಖಪ್ಪ ಆಣದೂರೆ, ವಿಠಲರಡ್ಡಿ ಆಣದೂರೆ, ವಿಜಯಕುಮಾರ ಬಾವಗೆ, ಸೋಮನಾಥ ಇತರರಿದ್ದರು