ದೇಶಮುಖ್‍ಗೆ ಪಿಎಚ್.ಡಿ ಪದವಿ

Sunil Deshmukh
Published on

ಬೀದರ್: ನಗರದ ಉಪನ್ಯಾಸಕ ಸುನೀಲ್ ಎಸ್. ದೇಶಮುಖ್ ಅವರಿಗೆ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ.
ಡಾ. ಸಂಗಮೇಶ ಪುರಾಣಿಕ ಮಾರ್ಗದರ್ಶನದಲ್ಲಿ ‘ಡೆವಲೆಪ್‍ಮೆಂಟ್ ಆ್ಯಂಡ್ ವ್ಯಾಲುವೆಷನ್ ಆಫ್ ಹರ್ಬೊಸಮ್ಸ್ ಆ್ಯಂಡ್ ಫಾಸ್ಟ್ ಡಿಸಾಲ್ವಿಂಗ್ ಟ್ಯಾಬ್ಲೆಟ್ಸ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.
ಸುನೀಲ್ ದೇಶಮುಖ್ ಅವರಿಗೆ ಪಿ.ಎಚ್.ಡಿ. ಪದವಿ ಲಭಿಸಿದ್ದಕ್ಕೆ ಗೋವಿಂದರಾವ್ ಮುಳೆ ಬಿ.ಎಡ್. ಕಾಲೇಜು ಪ್ರಾಚಾರ್ಯ ರಾಚಪ್ಪ ಖರ್ಗೆ, ಡಾ. ಬಸವರಾಜ ಎಸ್. ಬಲ್ಲೂರ, ಶಿವಾನಂದ ಸೇರಿದಂತೆ  ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net