ಚಿಮ್ಮಾ ಕಾಂಗ್ರೆಸ್ ಸೇರ್ಪಡೆ

chimma photos
Published on

ಬೀದರ್: ಯುವ ಉದ್ಯಮಿ ವಿಶ್ವನಾಥ ಚಿಮ್ಮಾ ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಸೋಮವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಮ್ಮಾ ಅವರಿಗೆ ಪಕ್ಷದ ಧ್ವಜ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‍ಖಾನ್ ಬರಮಾಡಿಕೊಂಡರು.
ಕ್ಷೇತ್ರದ ಎಲ್ಲೆಡೆ ಕಾಂಗ್ರೆಸ್ ಹವಾ ಇದೆ. ಎಲ್ಲೆಡೆ ಭರ್ಜರಿ ಸ್ವಾಗತ ಸಿಗುತ್ತಿದೆ. ಈ ಬಾರಿ ಸಾಗರ್ ಖಂಡ್ರೆ ಗೆಲುವು ಖಚಿತ. ಸುಮಾರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಜಯಗಳಿಸಲಿದೆ ಎಂದು ಖಂಡ್ರೆ ಹೇಳಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದಿನ್, ಪ್ರಮುಖರಾದ ಅಮೃತರಾವ ಚಿಮಕೋಡೆ, ಧನರಾಜ ಹಂಗರಗಿ, ವಿನೋದಕುಮಾರ ಉಪ್ಪೆ, ರಾಜು ಹಂಗರಗಿ, ಮಹಾಲಿಂಗ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net