

ಬೀದರ್: ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮದಲ್ಲಿ ಸಾರ್ವಜನಿಕರಿಗೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳನ್ನು ವಿತರಿಸಲಾಯಿತು.
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು. ಡಾ. ಭೀಮಸೇನರಾವ್ ಸಿಂಧೆ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಬೀದರ್ ಲೋಕಸಭಾ ಕ್ಷೇತ್ರದ ಸಂಯೋಜಕರಾದ ಸಂದೀಪ್ ರೆಡ್ಡಿ, ನಂದಕಿಶೋರ, ಎಸ್.ಟಿ. ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ರಾಜಕುಮಾರ ಕಂದಗೂಳೆ, ಮುಖಂಡರಾದ ರಾಮಣ್ಣ ಒಡೆಯರ್, ಶಿವರಾಜ ದೇಶಮುಖ, ಆನಂದ ಗಂಗು, ಫಯಾಜ್ ಅಲಿ, ಅಮಿತ್ ಸೂರ್ಯವಂಶಿ, ದತ್ತಾತ್ರಿ ಬಾಪುರೆ, ಸಾಧುರೆ ಶಿವಕುಮಾರ ಮೊದಲಾದವರು ಇದ್ದರು.