

ಬೀದರ್: ಔರಾದ್ ತಾಲ್ಲೂಕಿನ ಬಾದಲಗಾಂವ್, ಯನಗುಂದಾ, ಸುಂದಾಳ, ದುಡಕನಾಳ ಹಾಗೂ ಕರಂಜಿ(ಬಿ) ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಸಾರ್ವಜನಿಕರಿಗೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳನ್ನು ವಿತರಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನ ಕಲ್ಯಾಣದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ. ಹೀಗಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಡಾ. ಭೀಮಸೇನರಾವ್ ಸಿಂಧೆ, ಔರಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಕಾಂಗ್ರೆಸ್ ಎಸ್.ಟಿ. ಘಟಕದ ರಾಜ್ಯ ಕಾರ್ಯದರ್ಶಿ ರಾಜಕುಮಾರ ಕಂದಗೂಳೆ, ಚನ್ನಪ್ಪ ಉಪ್ಪೆ, ಶಿವರಾಜ ದೇಶಮುಖ, ನೆಹರೂ ಪಾಟೀಲ, ರಾಮಣ್ಣ ಒಡೆಯರ್, ಅಮಿತ್ ಸೂರ್ಯವಂಶಿ, ಆನಂದ ಗಲಗಲೆ ಮತ್ತಿತರರು ಇದ್ದರು.