

ಬೀದರ್: ಕಾಂಗ್ರೆಸ್ ಪಕ್ಷದ ಬೀದರ್ ಲೋಕಸಭಾ ಕ್ಷೇತ್ರದ ಸಂಯೋಜಕರಾಗಿ ಸಂದೀಪ್ ರೆಡ್ಡಿ ಬನ್ನಳ್ಳಿ ಹಾಗೂ ನಂದಕಿಶೋರ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಂದೀಪ್ ರೆಡ್ಡಿ ಬನ್ನಳ್ಳಿ ಅವರು ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಂದಕಿಶೋರ ಕಾರ್ಯದರ್ಶಿ ಆಗಿದ್ದಾರೆ.