ತಂದೆ-ತಾಯಿ ಸೇವೆ ಮಾಡಿ

Shreemandal
Published on

ಬೀದರ್: ತಂದೆ-ತಾಯಿಯೇ ಶ್ರೇಷ್ಠ ದೇವರೆಂದು ತಿಳಿದು ಅವರ ಸೇವೆ ಮಾಡಬೇಕು ಎಂದು ಬೇಮಳಖೇಡ್ ನ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ಶ್ರೀಮಂಡಲದಲ್ಲಿ ಆಯೋಜಿಸಿದ್ದ ಚಂದ್ರಪ್ಪ ಬಿರಾದಾರ್ ಅಮೃತ ಮಹೋತ್ಸವ ಮತ್ತು ನಾಣ್ಯ ತುಲಾಭಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೆಸರು ಉಳಿಯುವಂತೆ ಏನು ಮಾಡಿದ್ದೇವೆ ಎಂಬ ಬಗ್ಗೆ ಆಲೋಚಿಸಬೇಕು ಎಂದರು.
ಶ್ರೀ ಪ್ರಶಾಂತ ಸ್ವಾಮೀಜಿ, ಹಾಸ್ಯನಟ ವೈಜಿನಾಥ ಬಿರಾದಾರ್, ಪ್ರೊ.ಸೋಮೇಶ್ವರ ಬಿರಾದಾರ್, ಪ್ರೊ.ಶಿವಕುಮಾರ ಉಪ್ಪೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಗ್ರಾಪಂ ಅಧ್ಯಕ್ಷ ಗುಣಶೆಟ್ಟಿ ಮಂಜುನಾಥ, ಕಾಶೀನಾಥರಾವ ಪಾಟೀಲ್ ನಿಟ್ಟೂರ, ಶಿವರಾಯ ಮುದಾಳೆ ಮಾತನಾಡಿದರು.
ಪ್ರಮುಖರಾದ ರಾಜಕುಮಾರ ಸಜ್ಜನಶೆಟ್ಟಿ ಬುಧೇರಾ, ಬಸವರಾಜ ಬಿರಾದಾರ್, ಜಗನ್ನಾಥ ಮೊಗಡಂಪಳ್ಳಿ, ಕುಬೇಂದ್ರಪ್ಪ ಗೌಡರು, ಶಾಂತಕುಮಾರ ಮುದಾಳೆ, ಬಾಬುರಾವ ಪಾಟೀಲ್ ತೇಗಂಪುರ, ಶಿವಕುಮಾರ ಪಾಟೀಲ್, ಲೀಲಾವತಿ ಸೋಮೇಶ್ವರ, ವಿಜಯಲಕ್ಷ್ಮಿ ಸಂಗಶೆಟ್ಟಿ, ಡಾ.ಸುರೇಖಾ ಭಗವಾನ್, ಉಲ್ಕಾವತಿ ಶಾಂತಕುಮಾರ, ವಿಜಯಲಕ್ಷ್ಮಿ ಬಿರಾದಾರ್, ಅಶ್ವಿನಿ ಔರಾದೆ, ಸಾಯಿನಾಥ ಪಾಟೀಲ್, ಹಾವಗಿರಾವ ಮುದಾಳೆ, ಶಿವಶಂಕರ ಕಾಮಶೆಟ್ಟೆ ಇತರರಿದ್ದರು. ಸೋಮೇಶ್ವರ ಬಿರಾದಾರ್ ಸ್ವಾಗತಿಸಿದರು. ವೀರಶೆಟ್ಟಿ ಮಹಾರಾಜವಾಡೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net