ಬಸವ ಜಯಂತಿ ಉತ್ಸವ ಸಮಿತಿಗೆ ಚನ್ನಶೆಟ್ಟಿ ಅಧ್ಯಕ್ಷ

meeting - Copy
Published on

ಬೀದರ್: ಪ್ರಸಕ್ತ ವರ್ಷದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಸುರೇಶ ಚನ್ನಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಿರೂಪಾಕ್ಷ ಗಾದಗಿ ಹಾಗೂ ಕೋಶಾಧ್ಯಕ್ಷರಾಗಿ ಡಾ.ರಜನೀಶ್ ವಾಲಿ ಅವಿರೋಧ ಆಯ್ಕೆಯಾಗಿದ್ದಾರೆ.
ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮೇ 10ರಂದು ನಗರದಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣ ಜತೆಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅಧ್ಯಕ್ಷತೆ, ನಗರಸಭೆ ಸದಸ್ಯ ಚಂದ್ರಶೇಖರ ಪಾಟೀಲ್ ಗಾದಗಿ ನೇತೃತ್ವ ವಹಿಸಿದ್ದರು. ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ಗುರುನಾಥ ಕೊಳ್ಳುರ್, ಬಾಬು ವಾಲಿ, ಸೋಮಶೇಖರ ಪಾಟೀಲ್ ಗಾದಗಿ, ಬಸವರಾಜ ಬುಳ್ಳಾ ಶರಣಪ್ಪ ಮಿಠಾರೆ, ಪ್ರಭುರಾವ ವಸ್ಮತೆ, ದೀಪಕ್ ವಾಲಿ, ಆನಂದ ದೇವಪ್ಪ, ಬಸವರಾಜ ಪಾಟೀಲ್ ಹಾರೂರಗೇರಿ, ರೇವಣಸಿದ್ದಪ್ಪ ಜಲಾದೆ, ಶಶಿಧರ ಹೊಸಳ್ಳಿ, ಧನರಾಜ ಹಂಗರಗಿ, ಜಯರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ದಾನಿ ಬಾಬುರಾವ ಇತರರಿದ್ದರು.
ಸನ್ಮಾನ: ಗಾಂಧಿಗಂಜ್ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷ ಬಸವರಾಜ ಧನ್ನೂರ, ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ನೂತನ ಸದಸ್ಯ ಡಾ.ರಜನೀಶ್ ವಾಲಿ ಹಾಗೂ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನೂತನ ಸದಸ್ಯ ಬಸವರಾಜ ಭತಮುರ್ಗೆ ಅವರನ್ನು ಸಭೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net