

ಬೀದರ್: ಲೋಕಸಭಾ ಚುನಾವಣೆಗೆ ಗುರುವಾರ ಹತ್ತು ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಎರಡು, ಅವರ ಸೂಚಕರಾದ ಬಂಡೆಪ್ಪ ಖಾಶೆಂಪುರ ಅವರು ಖೂಬಾ ಪರ ಒಂದು ಸೇರಿ ಬಿಜೆಪಿಯಿಂದ ಮೂರು ನಾಮಪತ್ರ ಸಲ್ಲಿಕೆಯಾಗಿವೆ. ಬಿಎಸ್ಪಿಯಿಂದ ದತ್ತು ತುಕಾರಾಮ, ಭಾರತ ಲೋಕಸೇವಾ ಅಭ್ಯರ್ಥಿ ಸುಧಾಕರ ವೆಂಕಟರಾವ, ಆರ್ಪಿಐನ ಮಹೇಶ ಗೋರನಾಳಕರ್, ಬಹುಜನ ಭಾರತ ಪಕ್ಷದ ಅಂಬಾದಾಸ ಸೋಪಾನ, ರಾಷ್ಟ್ರೀಯ ಸಮಾಜ ಪಕ್ಷದ ದತ್ತಪ್ಪ ಕೃಷ್ಣಪ್ಪ, ಪ್ರಹಾರ ಜನಶಕ್ತಿ ಪಕ್ಷದ ರೌಫ್ ಅಬ್ದುಲ್ ಗನಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಉಮೇಶ ಪಾಂಡ್ರೆ ಉಮೇದುವಾರಿಕೆ ದಾಖಲಿಸಿದ್ದಾರೆ.
ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಶನಿವಾರ ನಾಮಪತ್ರ ಪರಿಶೀಲನೆ, 22 ಹಿಂಪಡೆಯಲು ಕೊನೆಯ ದಿನ. ಏ.16ರಿಂದ ಈವರೆಗೆ 24 ಅಭ್ಯಥರ್ಿಗಳಿಂದ 28 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಡಿಸಿ ಕಚೇರಿ ಪ್ರಕಟಣೆ ತಿಳಿಸಿದೆ.